bantwalnews.com
ಮೂಡುಬಿದಿರೆ ರೋಟರಿ ಕ್ಲಬ್ ಮುಂದಾಳುತ್ವದಲ್ಲಿ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಗಾಗಿ ಅಗತ್ಯ ಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳು, ಸ್ಥಳೀಯಾಡಳಿತ, ನಾಗರಿಕರ ಸಹಯೋಗದೊಂದಿಗೆ ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಮೂಡುಬಿದಿರೆ ರೋಟರಿ ಕ್ಲಬ್‌ನೊಂದಿಗೆ, ಮೂಡುಬಿದಿರೆ ಪ್ರೆಸ್ ಕ್ಲಬ್, ಕೃಷಿ ವಿಚಾರ ವಿನಿಮಯ ಕೇಂದ್ರ, ಮೂಡುಬಿದಿರೆ ಪುರಸಭೆ ಕೈಜೋಡಿಸಿವೆ. ಜಲ ಸಂರಕ್ಷಣೆಯ ಬಗ್ಗೆ ಚಿಂತನೆ ನಡೆಸಿ, ಸಾರ್ವಜನಿಕರಲ್ಲಿ ಜನಜಾಗೃತಿ ರೂಪಿಸುವ ಜೊತೆಗೆ ಸರಕಾರ ಮತ್ತು ಇತರ ಮೂಲಗಳಿಂದ ಲಭ್ಯ ಅನುದಾನಗಳಿಂದ ಮಾಡಬಹುದಾದ ಜಲ ಸಂರಕ್ಷಣಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮೂಡುಬಿದಿರೆ ಜಲ ಸಂರಕ್ಷಣಾ ಸಮಿತಿ ಸಹಕರಿಸಲಿದೆ.
18 ಕೆರೆಗಳಿಗಾಗಿ ಹೆಸರಾದ ಮೂಡುಬಿದಿರೆಯ ಹಲವು ಕೆರೆಗಳ ಕಣ್ಮರೆಯಾಗುವ ಸ್ಥಿತಿಯಲ್ಲಿದ್ದು ಅವುಗಳಲ್ಲಿ ಕನಿಷ್ಠ 6 ಕೆರೆಗಳಿಗೆ ಕಾಯಕಲ್ಪ ನೀಡುವ ಜೊತೆಗೆ, ಸಾಧ್ಯವಾದಲ್ಲಿ ಒಡ್ಡುಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿ ಯೋಜನೆ ರೂಪಿಸಿದೆ. ರೋಟರಿ ಸಮ್ಮೀಲನ್ ಸಭಾಭವನದಲ್ಲಿ ಗುರುವಾರ ನಡೆದ ಸಮಾಲೋಚನ ಸಭೆಯಲ್ಲಿ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ.ಎಲ್.ಸಿ ಸೋನ್ಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಿ.ಕೆ ಥೋಮಸ್ ಕಾರ್ಯಾಧ್ಯಕ್ಷರಾಗಿದ್ದು, ಜೈಸನ್ ತಾಕೋಡೆ( ಕಾರ್ಯದರ್ಶಿ),ರಾಜವರ್ಮ ಬೈಲಂಗಡಿ(ಉಪಾಧ್ಯಕ್ಷ) ಅನಂತಕೃಷ್ಣ ರಾವ್ (ಕೋಶಾಧಿಕಾರಿ), ವಿನೋದ್ ಸೆರಾವೋ(ಜೊತೆ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಮಹಮ್ಮದ್ ಶರೀಫ್, ಡಾ.ಮುರಳೀಕೃಷ್ಣ, ಸುಭಾಶ್ಚಂದ್ರ ಚೌಟ, ರತ್ನಾಕರ ದೇವಾಡಿಗ, ಡಾ.ಸುದೀಪ್ ಕುಮಾರ್, ಶ್ರೀಕಾಂತ್ ರಾವ್, ಸೀತಾರಾಮ ಆಚಾರ್ಯ, ಅಲ್ವಿನ್ ಮೆನೇಜಸ್, ಜಿನೇಂದ್ರ ಹೆಗ್ಡೆ, ಧನಂಜಯ ಮೂಡುಬಿದಿರೆ, ಸುರೇಶ್ ಕೋಟ್ಯಾನ್, ಮಕ್ಬೂಲ್ ಹುಸೇನ್, ದಿನೇಶ್, ಯಶೋಧರ ಬಂಗೇರ, ಕೊರಗಪ್ಪ, ಲವೀನಾ ತಾಕೋಡೆ ಕಾರ್ಯಕಾರಿಣಿ ಸಮಿತಿಯ ಸದಸ್ಯರು.