ಬಂಟ್ವಾಳ

11, 12ರಂದು ಬಂಟ್ವಾಳದಲ್ಲಿ ಕೃಷಿ ಉತ್ಸವ

  • ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಬಂಟ್ವಾಳ ತಾಲೂಕು ಸಮಿತಿ ಆಶ್ರಯ
  • ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟನೆ
  • 15 ಸಾವಿರಕ್ಕಿಂತಲೂ ಅಧಿಕ ರೈತರು ಭಾಗಿ ನಿರೀಕ್ಷೆ
  • ಪ್ರತಿ ದಿನವೂ ವೈವಿಧ್ಯಮಯ ಕಾರ್ಯಕ್ರಮ, ವಸ್ತು ಪ್ರದರ್ಶನ
  • 11ರಂದು ಆಕರ್ಷಕ ಮೆರವಣಿಗೆ, ವಿವಿಧ ವಿಚಾರಗೋಷ್ಠಿ

 bantwalnews.com report

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು, ಕೃಷಿ ಉತ್ಸವ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕೃಷಿ ಉತ್ಸವ 2016-17 ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ಜನವರಿ 11, 12ರಂದು ನಡೆಯಲಿದೆ.

ಕೃಷಿ ಉತ್ಸವ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

11ರಂದು ಬುಧವಾರ ಬೆಳಗ್ಗೆ 10ರಿಂದ ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ವಿವಿಧ ವಾದ್ಯಘೋಷಗಳೊಂದಿಗೆ ಕೃಷಿ ಉತ್ಸವ ಮೆರವಣಿಗೆ ಹೊರಡಲಿದೆ. ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಚಿವ ಬಿ.ರಮಾನಾಥ ರೈ ವಹಿಸುವರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲು, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಮಾಜಿ ಸಚಿವ ನಾಗರಾಜ ಶೆಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್‌ನ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಶುಸಂಗೋಪನೆ ಇಲಾಖೆಯ ಉಪನಿದೇರ್ಶಕ ಡಾ. ಟಿ.ತಿಪ್ಪೇಸ್ವಾಮಿ, ಪ್ರಗತಿಪರ ಕೃಷಿಕ ರಾಜೇಶ್ ಉಳಿಪಾಡಿಗುತ್ತು, ಬಂಟ್ವಾಳ ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ತುಂಬೆಯ ಅಬ್ದುಲ್ ಅಝೀಜ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.

ಮಧ್ಯಾಹ್ನ ಕೃಷಿ ವಿಚಾರಗೋಷ್ಠಿ ಜೀವಜಲ ಸಂರಕ್ಷಣೆಯ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು ದ.ಕ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸುವರು. ಎಸ್.ಎನ್. ಅಬೂಬಕ್ಕರ್ ಮತ್ತು ಮನೋಜ್ ಮಿನೇಜಸ್ ವಿಷಯವನ್ನು ಮಂಡನೆ ಮಾಡಲಿರುವರು. ದ.ಕ ಜಿ.ಪಂ.ನ ಸದಸ್ಯ ರವೀಂದ್ರ ಕಂಬಳಿ, ಸಂಜೀವ ಪೂಜಾರಿ, ಗೋಪಾಲ ಆಚಾರ್ಯ ಉಪಸ್ಥಿತರಿರುವರು.

ಭತ್ತದ ಬೇಸಾಯದಲ್ಲಿ ಯಾಂತ್ರಿಕತೆಯ ವಿಚಾರ ಗೋಷ್ಠಿಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿದೇರ್ಶಕ ಕೆಂಪೇಗೌಡ ಅಧ್ಯಕ್ಷತೆಯನ್ನು ವಹಿಸಲಿದ್ದು, ಪ್ರಗತಿಪರ ಕೃಷಿಕ ಕರುಣಾಕರ ಆಚಾರ್ಯ ಕುತ್ಲೂರು ವಿಷಯ ಮಂಡನೆ ಮಾಡಲಿರುವರು. ಅನುಭವ ಹಂಚಿಕೆಯನ್ನು ಪ್ರಗತಿಪರ ಕೃಷಿಕ ರಮೇಶ ಮಾಡಲಿರುವರು. ವಿಟ್ಲ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ ಜೈನ್ ಉಪಸ್ಥಿತರಿರುವರು.

ಸಂಜೆ ಸ್ವ-ಸಹಾಯ ಸಂಘದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ನಂತರ ಯಕ್ಷ ಭಜನೆ ನಡೆಯಲಿದ್ದು ಗಾಯಕರಾಗಿ ಯೋಗೀಶ್ ಅಳದಂಗಡಿ, ಧನಂಜಯ ಅಣ್ಣಳಿಕೆ, ಸುದರ್ಶನ್ ಶೆಟ್ಟಿ ಅರಳ, ಚೆಂಡೆಯಲ್ಲಿ ವೆಂಕಟೇಶ್ ಶೆಟ್ಟಿ ಮೂರ್ಜೆ, ಮದ್ದಳೆಯಲ್ಲಿ ಚಂದ್ರಶೇಖರ್ ಆಚಾರ್ಯ ಭಾಗವಹಿಸಲಿದ್ದಾರೆ ಹಾಗೂ ರಾತ್ರಿ ಕಿಶೋರ್ ಡಿ.ಶೆಟ್ಟಿಯವರ ನಿರ್ದೇಶನದಲ್ಲಿ ಲಕುಮಿ ತಂಡದ ಕುಸ್ದಲ ಕಲಾವಿದರು ಅಭಿನಯಿಸುವ ದುಂಬೊರಿ ಪಂತೆಗೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.

12ರಂದು ನಡೆಯಲಿರುವ ವ್ಯಸನಮುಕ್ತ ಕುಟುಂಬ ವಿಚಾರಗೋಷ್ಠಿಯಲ್ಲಿ ದ.ಕ ಜಿ. ಪಂ.ನ ಸದಸ್ಯ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸಲಿದ್ದು, ಧರ್ಮಸ್ಥಳ ಜ.ಜಾ.ವೇ.. ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ವಿಷಯ ಮಂಡನೆ ಮಾಡಲಿದ್ದಾರೆ. ಪಾರ್ವತಿ ವಿಟ್ಲ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ. ಭಂಡಾರಿ, ಜಿ.ಪಂ.ನ ಸದಸ್ಯ ಮಮತಾ ಗಟ್ಟಿ, ಮಾಜಿ ಜಿ. ಪಂ.ನ ಸದಸ್ಯ ಸುಲೋಚನಾ ಜಿ.ಕೆ ಭಟ್ ಉಪಸ್ಥಿತರಿರುವರು.

ಸಮಗ್ರ ತೋಟಗಾರಿಕಾ ಬೆಳೆಗಳು ವಿಚಾರ ಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್. ಆರ್ ಯೋಗೀಶ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ತಾಂತ್ರಿಕ ಅಧಿಕಾರಿ ಪುರಂದರ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಬಿ.ಎಸ್. ಚೆನ್ನಪ್ಪ ಪೂಜಾರಿ, ಜಿ.ಪಂ.ನ ಸದಸ್ಯ ಪದ್ಮಶೇಖರ ಜೈನ್, ಜಯಶಂಕರ ಬಾಸ್ರಿತ್ತಾಯ, ಬಂಟ್ವಾಳ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕಿರಣ ಹೆಗ್ಡೆ ಉಪಸ್ಥಿತರಿರುವರು

ಲಾಭದಾಯಕ ಹೈನೋದ್ಯಮ ವಿಚಾರ ಗೋಷ್ಠಿಯಲ್ಲಿ ಮಾಣಿ ಪಶುವೈದ್ಯ ಆಸ್ಪತ್ರೆಯ ಸಕಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಟಿ.ಜಿ.ಅಧ್ಯಕ್ಷತೆ ವಹಿಸಲಿದ್ದು, ಬೆಂಜನಪದವು ಪಶುವೈದ್ಯಾಧಿಕಾರಿ ಡಾ. ರವಿಕುಮಾರ್ ಎಂ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಸುರೇಶ ಗೌಡ ಪುಣಚ, ಜಿ.ಪಂ.ನ ಸದಸ್ಯ ಎಂ.ಎಸ್. ಮಹಮ್ಮದ್, ಬಂಟ್ವಾಳ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಬಂಟ್ವಾಳ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಉಮೇಶ ಆಚಾರ್ಯ ಉಪಸ್ಥಿತರಿರುವರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ರೊನಾಲ್ಡ್ ಡಿ’ಸೋಜಾ ಅಧ್ಯಕ್ಷತಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್, ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ, ದ.ಕ ಜಿ.ಪಂ.ನ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ, ಶ್ರೀ.ಕ್ಷೇ.ಧ. ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಎಲ್.ಎಚ್. ಮಂಜುನಾಥ್, ಬಂಟ್ವಾಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ್, ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್‌ನ ಅಧ್ಯಕ್ಷ ಎಸ್. ಸತೀಶ್‌ಚಂದ್ರ, ಬಂಟ್ವಾಳದ ಸೇಸಪ್ಪ ಕೋಟ್ಯಾನ್, ನರಿಕೊಂಬುವಿನ ಅಧ್ಯಕ್ಷ ನಿತ್ಯಾನಂದ ಸಪಲ್ಯ, ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷ ರಿತೇಶ್ ಬಾಳಿಗಾ, ಸದಾನಂದ ಗೌಡ ಉಪಸ್ಥಿತರಿರುವರು. ಚಿಣ್ಣರ ಲೋಕ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಬಿ.ಸಿ.ರೋಡಿನ ಎಕ್ಟ್ರೀಮ್ ಡ್ಯಾನ್ಸ್ ಕ್ರೀವ್ಸ್‌ರವರಿಂದ ನೃತ್ಯ ವೈವಿಧ್ಯ ನಡೆಯಲಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ. ಭಂಡಾರಿ, ಅಧ್ಯಕ್ಷ ಪ್ರಕಾಶ್ ಕಾರಂತ್, ನಿಕಟಪೂರ್ವ ಅಧ್ಯಕ್ಷ ಕಿರಣ ಹೆಗ್ಡೆ, ಯೋಜನಾಧಿಕಾರಿ ಸುನೀತಾ ನಾಯಕ್  ಪ್ರಗತಿಬಂದು ಸ್ವಸಹಾಯ ಕೇಂದ್ರ ಸಮಿತಿಯ ಅಧ್ಯಕ್ಷ, ಚಂದ್ರಶೇಖರ, ಸದಾನಂದ,  ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಂತಿ, ಕೃಷಿ ಅಧಿಕಾರಿ ನಾರಾಯಣ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts