ನೀರಿನ ಪೈಪ್ ಒಡೆದ ಪರಿಣಾಮ, ಪಾಣೆಮಂಗಳೂರು ವೀರವಿಠಲ ದೇವಸ್ಥಾನದ ಎದುರಿನ ನಡು ರಸ್ತೆಯಲ್ಲಿ ಬೃಹತ್ ಗುಂಡಿಯೊಂದು ನಿರ್ಮಾಣವಾಗಿದೆ.
ಈ ರಸ್ತೆಯ ಅಡಿ ಭಾಗದಲ್ಲಿ ಹಾದು ಹೋಗಿರುವ ಬಂಟ್ವಾಳ ಪುರಸಭೆಗೆ ಸೇರಿದ ನೀರಿನ ಪೈಪ್ ಮಂಗಳವಾರ ಒಡೆದು ನೀರು ಸೋರಿಕೆಯಾಗಿದ್ದು ನೀರು ರಭಸದಿಂದ ಹರಿದು ರಸ್ತೆ ಅಡಿ ಭಾಗದ ಮಣ್ಣು ಕರಗಿದ್ದರಿಂದ ಬೆಳಗ್ಗಿನ ಜಾವ ವಾಹನ ಸಂಚರಿಸುವಾಗ ಈ ಹೊಂಡ ನಿರ್ಮಾಣವಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಸ್ಥಳೀಯರು ಹೊಂಡದ ಸುತ್ತಲೂ ಊರಿನ ಜನರೇ ಕಲ್ಲುಗಳನ್ನು ಇಟ್ಟಿದ್ದಾರೆ. ಆದರೂ ವೇಗವಾಗಿ ಸಂಚಾರಿಸುವ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಕೂಡಲೇ ಪುರಸಭಾ ಅಧಿಕಾರಿಗಳು ಹೊಂಡವನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.