https://bantwalnews.com report
ಕೋರ್ಟು ತಡೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬಂಟ್ವಾಳ ಎಪಿಎಂಸಿ ಚುನಾವಣೆಗೆ ಮತ್ತೆ ದಿನ ನಿಗದಿಯಾಗಿದೆ. ಜನವರಿ 12ರಂದು ಮತದಾನ ನಡೆಯಲಿದೆ. 13ರಂದು ಅವಶ್ಯವಿದ್ದಲ್ಲಿ ಮರುಮತದಾನ, 14ರಂದು ಮತ ಎಣಿಕೆ ನಡೆಯಲಿದೆ. ಕಣದಲ್ಲಿದ್ದಾರೆ ಒಟ್ಟು 25 ಅಭ್ಯರ್ಥಿಗಳು.
ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು. ಈ ಚುನಾವಣೆ ಗ್ರಾ.ಪಂ.ಚುನಾವಣೆ ಮಾದರಿಯಲ್ಲಿ ಪಕ್ಷದ ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ವಿವಿಧ ಪಕ್ಷದ ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಹಿಡಿದು ಪ್ರಚಾರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ನೋಂದಾಯಿತ ಕೃಷಿಕರು, ವರ್ತಕರು ಮತದಾರರು.
ಕ್ಷೇತ್ರಗಳು ಹಾಗು ಕಣದಲ್ಲಿರುವವರ ವಿವರ ಹೀಗಿವೆ.
1. ಸಂಗಬೆಟ್ಟು (ಸಾಮಾನ್ಯ, ಮತದಾರರು-3997), ಅಭ್ಯರ್ಥಿಗಳು: ಪದ್ಮರಾಜ ಬಲ್ಲಾಳ ಮಾವಂತೂರು ಮತ್ತು ವಸಂತ ಕುಮಾರ ಅಣ್ಣಳಿಕೆ
2. ಚನ್ನೈತೋಡಿ (ಸಾಮಾನ್ಯ ಮಹಿಳೆ, ಮತದಾರರು-3903), ಅಭ್ಯರ್ಥಿಗಳು: ಭಾರತಿ ಎಸ್. ರೈ ಪಡಂತರಕೋಡಿ ಮತ್ತು ಮಲ್ಲಿಕಾ ಅಜಿತ್ ಶೆಟ್ಟಿ.
3. ಅಮ್ಟಾಡಿ (ಹಿ.ವ.ಅ, ಮತದಾರರು-4715), ಅಭ್ಯರ್ಥಿಗಳು:ದಿವಾಕರ ಪಂಬದಬೆಟ್ಟು, ರಮೇಶ ಪೂಜಾರಿ ಬಟ್ಟಾಜೆ.
4. ಕಾವಳಮೂಡೂರು (ಸಾಮಾನ್ಯ, ಮತದಾರರು-4346), ಅಭ್ಯರ್ಥಿಗಳು: ವಿಶ್ವನಾಥ ಸಾಲಿಯಾನ್ ಬಿತ್ತ, ಹರಿಶ್ಚಂದ್ರ ಪೂಜಾರಿ ಕಜೆಕಾರು.
5. ಕೊಳ್ನಾಡು (ಹಿ.ವ.ಬಿ.,ಮತದಾರರು-3890), ಅಭ್ಯರ್ಥಿಗಳು:ಬಿ.ಚಂದ್ರಶೇಖರ ರೈ, ಯೋಗೀಶ ಆಳ್ವ ಪುದ್ದೋಟು.
6. ಅಳಕೆ(ಹಿ.ವ.ಬಿ.ಮಹಿಳೆ, ಮತದಾರರು-4054), ಅಭ್ಯರ್ಥಿಗಳು: ಗೀತಾಲತಾ ಟಿ.ಶೆಟ್ಟಿ, ಕೆ.ಭವಾನಿ ರೈ.
7. ಕೆದಿಲ(ಅನುಸೂಚಿತ ಪಂಗಡ, ಮತದಾರರು-3946), ಅಭ್ಯರ್ಥಿಗಳು: ಜಗದೀಶ ಡಿ, ಸುಂದರ ನಾಯ್ಕ.
8. ಮಾಣಿ(ಸಾಮಾನ್ಯ, ಮತದಾರರು-4768), ಅಭ್ಯರ್ಥಿಗಳು: ಬಿ.ನೇಮಿರಾಜ ರೈ, ಬಾಲಕೃಷ್ಣ ಆಳ್ವ.
9. ಕಡೇಶ್ವಾಲ್ಯ (ಸಾಮಾನ್ಯ , ಮತದಾರರು-3772), ಅಭ್ಯರ್ಥಿಗಳು: ಚಂದ್ರಶೇಖರ ಪೂಜಾರಿ, ಆರ್. ಚೆನ್ನಪ್ಪ ಕೋಟ್ಯಾನ್.
10. ಪಾಣೆಮಂಗಳೂರು (ಸಾಮಾನ್ಯ , ಮತದಾರರು-4004), ಅಭ್ಯರ್ಥಿಗಳು: ಅರವಿಂದ ಭಟ್, ಕೆ. ಪದ್ಮನಾಭ ರೈ.
11. ತುಂಬೆ (ಅನುಸೂಚಿತ ಜಾತಿ,ಮತದಾರರು-4402), ಅಭ್ಯರ್ಥಿಗಳು: ಚಂದ್ರಹಾಸ, ಪದ್ಮನಾಭ ನರಿಂಗಾನ, ವಿಠಲ ಸಾಲ್ಯಾನ್.
12. ವರ್ತಕರ ಕ್ಷೇತ್ರ (ಮತದಾರರು-204) ಅಭ್ಯರ್ಥಿಗಳು: ಬಾಲಕೃಷ್ಣ ಆಳ್ವ, ಎಸ್.ಎಂ.ಹುಸೈನ್.
ಒಟ್ಟು 46001 ಮಂದಿ ತಮ್ಮಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.ಕೃಷಿಕರು, ವರ್ತಕರ ಅನುಕೂಲಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟು ಬಿಜೆಪಿ ತಮ್ಮ ಬೆಂಬಲಿತ ಅಭ್ಯಥಿ೯. ಪರ ಮತಯಾಚನೆ ಮಾಡಲಿದ್ದರೆ, ರಾಜ್ಯ ಸರಕಾರ ಕೃಷಿಕರಿಗೆ ಜಾರಿ ತಂದಿರುವ ಯೋಜನೆಯನ್ನು ಮುಂದಿಟ್ಟು ಕಾಂಗ್ರೆಸ್ ತಮ್ಮ ಬೆಂಬಲಿತರ ಪರ ಮತಯಾಚನೆ ಮಾಡುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿಯೂ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೂಳ್ಳುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನಾಗಿಸಿದೆ.