ayush with sandarsh shetty
ayush with sandarsh shetty
ಪುಣೆಯ ಬಾಬುರಾವ್ ಸನಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾರಾಷ್ಟ್ರ ರಾಜ್ಯ ಮಟ್ಟದ ಸಬ್ ಜ್ಯೂನಿಯರ್ ಅಥ್ಲೆಟಿಕ್ ಕೂಟದಲ್ಲಿ ಮುಂಬಯಿಯ ಆಯುಷ್ ಶೆಟ್ಟಿ ಮತ್ತು ತಂಡ ಬೆಳ್ಳಿ ಪದಕವನ್ನು 4 * 100 ಮೀಟರ್ ರಿಲೇಯಲ್ಲಿ ಪಡೆದುಕೊಂಡಿದೆ.
ಮಹಾರಾಷ್ಟ್ರ ಅಥ್ಲೆಟಿಕ್ಸ್ ಅಸೋಸಿಯೇಶನ್ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಚಾಂಪಿಯನ್ ಶಿಪ್ ಕ್ರೀಡಾಕೂಟ ಆಯೋಜಿಸಿತ್ತು.
ಲಾಂಗ್ ಜಂಪ್ ನಲ್ಲೂ ಆಯುಷ್ ಶೆಟ್ಟಿ ಸಾಧನೆ ಮಾಡಿದ್ದು ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ. ಮೀರಾ ರೋಡ್ ನ ಎನ್.ಎಲ್. ದಾಲ್ಮಿಯಾ ಹೈಸ್ಕೂಲಿನ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿರುವ ಆಯುಷ್, ದಹಿಸರ್ ರೈಸಿಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ನ ವರಿಷ್ಠ ತರಬೇತುದಾರ ಸಂತೋಷ್ ಅಂಬ್ರೆ ಮತ್ತು ಅಂತಾರಾಷ್ಟ್ರೀಯ ಆಟಗಾರ ಸಂದರ್ಶ್ ಶೆಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ ಆಯುಷ್ ಮುಂಬಯಿಯ ವಿವಿಧ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಪಡೆದು ಮಿಂಚಿದ್ದು, ಭರವಸೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇವರು ಬಂಟ್ವಾಳ ಮೂಲದ ಉದ್ಯಮಿ ಸಮಾಜಸೇವಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಮತ್ತು ಪುತ್ತೂರು ಶಾಂತಲಾ ಎಸ್. ಶೆಟ್ಟಿ ದಂಪತಿ ಪುತ್ರ.