ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಮನಾರುಲ್ ಇಸ್ಲಾಮಿಯ ಹಿ. ಪ್ರಾ. ಶಾಲೆ ಹಾಗೂ ಅಂಗನವಾಡಿ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಿ.ಹೆಚ್. ಖಾದರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ನೋಂದಾವಣಾಧಿಕಾರಿಯಾದ ಎ.ಎಂ. ಖಾನ್ ಹಿತನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಾಜಿ ಬಿ.ಹೆಚ್. ಖಾದರ್‌ರವರನ್ನು ಸನ್ಮಾನಿಸಲಾಯಿತು.
ಸಂಚಾಲಕರಾದ ಮೊಹಮ್ಮದಾಲಿ ಎ.ಆರ್, ಅಧ್ಯಕ್ಷರಾದ ಬಿ.ಎ. ಸುಲೈಮಾನ್, ಕೋಶಾಧಿಕಾರಿಯಾದ ಮೊಹಮ್ಮದ್ ಸಾಧಿಕ್ ಬಿ.ಹೆಚ್.ಬಿ ಮತ್ತು ಸದಸ್ಯರು, ಪಿ. ಟಿ. ಎ. ಅಧ್ಯಕ್ಷರಾದ ಶಬೀರ್ ಅಹ್ಮದ್, ಉಪಾಧ್ಯಕ್ಷರಾದ ಮೊಹಮ್ಮದ್ ರಫೀಕ್, ಕೋಶಾಧಿಕಾರಿಯಾದ ಬಿ.ಎಂ. ಇಲ್ಯಾಸ್, ಕ್ರೀಡಾ ಕಾರ್ಯದರ್ಶಿಯಾದ ಬಿ.ಎಂ. ಬಶೀರ್ ಮತ್ತು ಸದಸ್ಯರು, ಜುಮ್ಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಅರಬಿ, ಅರೇಬಿಕ್ ಮದರಸದ ಸದರ್ ಅಬೂಬಕ್ಕರ್ ಸಿದ್ಧೀಕ್ ರಹ್‌ಮಾನಿ ಬಿ. ಎ. ಉಪಸ್ಥಿತರಿದ್ದರು.
ಶಾಲಾ ಕಾರ್ಯದರ್ಶಿ ಬಿ.ಎ.ಮಹಮ್ಮದ್‌ರವರು ಸ್ವಾಗತಿಸಿದರು. ತೌಹೀದ್ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಮೆಟಿಲ್ಡಾ ಡಿ’ಕೋಸ್ತಾ ಶಾಲಾ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು, ಕೆ.ಜಿ. ವಿಭಾಗದ ಮುಖ್ಯ ಶಿಕ್ಷಕಿ ಮಮತ ಸುವರ್ಣ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮನಾರುಲ್ ಶಾಲಾ ಮುಖ್ಯೋಪಾಧ್ಯಾಯರಾದ ರಮನಿ, ಅಂಗನವಾಡಿ ಶಿಕ್ಷಕಿ, ಭೋದಕ ಭೋದಕೇತರ ವರ್ಗ, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ನಸೀಮ್ ನೂರ್, ಮೀನಾ, ನಿಶ್ಮಿತ, ಪ್ರೀಮಾ ನಿರೂಪಿಸಿದರು.