ವ್ಯಕ್ತಿ

ಸಂಚಯಗಿರಿಯ ಕರ್ಮಯೋಗಿ

 

ಅಭಿವೃದ್ಧಿಯಾಗಬೇಕಾದರೆ ಕೇವಲ ಆಡಳಿತ ಕೆಲಸ ಮಾಡಿದರಷ್ಟೇ ಸಾಕಾಗುವುದಿಲ್ಲ, ನಾಗರಿಕರ ಸಹಭಾಗಿತ್ವ ಅಷ್ಟೇ ಅಗತ್ಯ.

ಜಾಹೀರಾತು

ಈ ಮಾತು ಬಹಳ ಸಾರಿ ಭಾಷಣಗಳಲ್ಲಿ ನಾವು ಕೇಳುತ್ತಾ ಬಂದಿದ್ದೇವೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡಿನಲ್ಲಿರುವ ಸಂಚಯಗಿರಿ ವಾರ್ಡಿಗೆ ಬಂದರೆ ಈ ಮಾತು ಸಾಕಾರಗೊಂಡಿದೆ ಎಂದು ಅನಿಸುತ್ತದೆ.

ಇಡೀ ಸಂಚಯಗಿರಿ ಅಂದದ ಜಾಗವಾಗಿ ಮಾರ್ಪಾಡಾಗಲು ಜನಜಾಗೃತಿ ಅಗತ್ಯ. ಅಲ್ಲಿನ ಜನರಿಗೆ ಇಂಥ ಕಾರ್ಯಕ್ಕೆ ಪ್ರೇರೇಪಿಸಲು ಮಾರ್ಗದರ್ಶನವೂ ಅಗತ್ಯ. ಇಂಥ ಕೆಲಸ ಮಾಡಿಕೊಂಡು ಇಡೀ ಪ್ರದೇಶವನ್ನು ಸುಂದರವಾಗಿಸಿದ ಕೀರ್ತಿ ಹಿರಿಯ ನಾಗರಿಕರೊಬ್ಬರಿಗೆ ಸಲ್ಲುತ್ತದೆ.

ಅವರ ಹೆಸರು ಎ.ದಾಮೋದರ್. ನ್ಯಾಯಾಲಯದಲ್ಲಿ ಅಮೀನರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು.

ದಾಮೋದರ್

ಹೊಳ್ಳರ ವಠಾರ, ಮೈಕ್ರೋ ಸ್ಟೇಷನ್ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಈ ಪ್ರದೇಶಕ್ಕೆ ಸ್ಥಳೀಯ ಪ್ರಮುಖರು ಸೇರಿಕೊಂಡು ಸಂಚಯಗಿರಿ ಎಂದು ನಾಮಕರಣ ಮಾಡಿದ್ದರು. ಪರಿಸರದಲ್ಲಿ ಮನೆಗಳು ಜಾಸ್ತಿಯಾಗುತ್ತಿದ್ದಂತೆ ಬಡವಾಣೆ ಅಭಿವೃದ್ದಿಗೊಳ್ಳಲಾರಂಭಿಸಿತು.

ಇದೇ ಹೊತ್ತಿನಲ್ಲಿ ದಾಮೋದರ್ ಪರಿಸರ ಅಭಿವೃದ್ಧಿ ಕುರಿತ ವಿಶೇಷ ಕಾಳಜಿ ವಹಿಸಲಾರಂಭಿಸಿದರು. 36 ವರ್ಷಗಳಿಂದ ಸಂಚಯಗಿರಿಯಲ್ಲಿ ವಾಸಿಸುತ್ತಿರುವ ದಾಮೋದರ್ ಪರಿಸರದಲ್ಲಿ ಯಾವುದೇ ಕಸ ಬೀಳದಂತೆ ನೋಡಿಕೊಳ್ಳುತ್ತಾರೆ. ಮನೆ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಪುರಸಭೆಯವರು ವಿಲೇವಾರಿ ಮಾಡಿಕೊಳ್ಳುವಲ್ಲಿ ಮುತುವರ್ಜಿ ವಹಿಸುತ್ತಾರೆ.  ಖುದ್ದು ಅವರೇ ನಿತ್ಯ ಕಸಬರಿಕೆ ಹಿಡಿದು ವಾರ್ಡ್ ಗುಡಿಸುತ್ತಾರೆ.  ಕಳೆ ಗಿಡಗಳು ಬೆಳೆದಾಗ  ಅವುಗಳನ್ನು ಕೀಳಿ ಸ್ವಚ್ಛಗೊಳಿಸುತ್ತಾರೆ. ಚರಂಡಿಗಳಲ್ಲಿ ನೀರು ನಿಲ್ಲದಂತೆ ಗಮನ ವಹಿಸುತ್ತಾರೆ. ಸಂಚಯಗಿರಿಯನ್ನು ಪ್ಲಾಸ್ಟಿಕ್ ಮುಕ್ತ ಬಡಾವಣೆಯನ್ನಾಗಿ ಘೋಷಿಸಿ ಪ್ಲಾಸ್ಟಿಕ್‌ಗಳು ಬೀಳದಂತೆ ಎಚ್ಚರ ವಹಿಸುತ್ತಾರೆ.

ಹೀಗಾಗಿಯೇ ವಾರ್ಡಿನ ಜನರಿಗೆ ದಾಮೋದರ್ ಅಚ್ಚುಮೆಚ್ಚು.

ವಾರ್ಡ್‌ನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅಲ್ಲಿನ ನಾಗರಿಕರು ದಾಮೋದರ್ ಅವರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಾರೆ, ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಟೆಲಿಪೋನ್ ಸಮಸ್ಯೆ ಹೀಗೆ ಏನೇ ಸಮಸ್ಯೆಗಳನ್ನು ಹೇಳಿಕೊಂಡರೂ ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ ಸಮಸ್ಯೆಗಳು ಬಹೆಗರಿಯುವ ವರೆಗೂ ಅದರ ಬೆನ್ನು ಹಿಡಿಯುತ್ತಾರೆ. ಪುರಸಭೆಗೆ ಮನೆ ತೆರಿಗೆ ಸಂದಾಯವಾಗುವಂತೆ ನೋಡಿಕೊಳ್ಳುತ್ತಾರೆ. ಅದಕ್ಕೆ ಸಂಬಂಧಪಟ್ಟ ಫಾರಂಗಳನ್ನು ತಾವೇ ಭರ್ತಿ ಮಾಡಿ, ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿ ರಸೀದಿಯನ್ನು ಆಯಾಯಾ ಮನೆಗಳಿಗೆ ತಲುಪಿಸುತ್ತಾರೆ. ಕಳೆದ 21 ವರ್ಷಗಳಿಂದ ದಾಮೋದರ್ ಅವರು ವಾರ್ಡ್‌ನ ಸಮಗ್ರ ಅಭಿವೃದ್ದಿಗಾಗಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಸಂಚಯಗಿರಿ ವಾರ್ಡ್ ಸ್ವಚ್ಛ, ಸುಂದರವಾಗಿರಬೇಕಾದರೆ ಎಪ್ಪತ್ತೊಂದರ ಹರೆಯದ ದಾಮೋದರ್ ಅವರೇ ಕಾರಣ ಎಂಬ ಹೆಮ್ಮೆ ಪ್ರತಿಯೊಬ್ಬ ನಿವಾಸಿಗಳಲ್ಲಿದೆ.

(೨೦೧೬ರಲ್ಲಿ ಬಂಟ್ಚಾಳನ್ಯೂಸ್ ನಲ್ಲಿ ಪ್ರಕಟವಾದ ಲೇಖನ ಮರುಓದಿಗೆ)

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts