ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಕೃಷಿ ಪಾಠ
ಜೀವನದಲ್ಲಿ ಸ್ವಾವಲಂಬಿಯಾಗಬೇಕಾದರೆ, ಕೃಷಿಕರಾಗಿ. ಆಧುನಿಕ ತಂತ್ರಜ್ಞಾನದಿಂದ ಕೃಷಿ ಇಂದು ಲಾಭದಾಯಕವಾಗಿದೆ. ಇದರ ಬಗ್ಗೆ ಕೀಳರಿಮೆ ಬೇಡ, ಕೃಷಿ ಸಾಧ್ಯತೆಗಳು ಇಂದು ವಿಸ್ತಾರವಾಗಿದೆ. ಟೆರೇಸ್ ನಲ್ಲೂ ಕೃಷಿ ಮಾಡಬಹುದು. ಒಟ್ಟಾರೆಯಾಗಿ ಇಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡುವುದು ಮುಖ್ಯ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು ಹೇಳಿದರು.
ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ ಮಾಡಿದ ಅವರು, ತನ್ನ ಬರಡು ಭೂಮಿಯನ್ನೂ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು ಇಚ್ಛಾಶಕ್ತಿ ಇದ್ದರೆ ಕೃಷಿ ಪ್ರಗತಿ ಸಾಧ್ಯ. ತಮ್ಮ ಕೃಷಿ ಚಟುವಟಿಕೆ ವೀಕ್ಷಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಕೃಷಿ ಚಟುವಟಿಕೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ರಾಜೇಶ್ ನಾಯ್ಕ್ ಸಂವಾದ ನಡೆಸಿದರು.
ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜ, ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಮುಖಂಡರಾದ ಜಿ.ಆನಂದ ಮತ್ತಿತರರು ಉಪಸ್ಥಿತರಿದ್ದರು.