ಅಂಗಾಗಗಳ ಮೌಲ್ಯವನ್ನು ಪ್ರತಿಯೊಬ್ಬ ವ್ಯಕ್ತಿ ಅರಿತುಕೊಂಡಾಗ ಆತ ಶ್ರೇಷ್ಟತೆಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ ಎಂದು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಬಿ.ಜಗನ್ನಾಥ ಚೌಟ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಜನಜಾಗೃತಿ ವೇದಿಕೆ ಬಂಟ್ವಾಳ ಇವರ ಆಶ್ರಯದಲ್ಲಿ ಜ| ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಸರಕಾರಿ ಲೇಡಿಗೊಷನ್ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ 85ನೇ ರಕ್ತದಾನ ಶಿಬಿರವನ್ನು ಸ್ವತಃ ರಕ್ತದಾನ ಮಾಡುವ ಮೂಲಕ ಅವರು ಉದ್ಘಾಟಿಸಿದರು. ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸ್ವಯಂ ಪ್ರೇರಿತಾರಗಿ ರಕ್ತದಾನ ಮಾಡಿದರೆ ಒಬ್ಬ ವ್ಯಕ್ತಿ ನಾಲ್ಕು ಮಂದಿಗೆ ಪ್ರಾಣದಾನ ಮಾಡಿದಂತಾಗುತ್ತದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ರಕ್ತದಾನ ವಿಭಾಗದ ನಿರ್ದೇಶಕ ಎಡ್ವರ್ಡ್ ವಾಝ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ವಿನಾಯಕ ಉಪಸ್ಥಿರಿದ್ದರು. ಯು.ಎಂ.ರಿಯಾಝ್, ಎಂ.ಸದಾಶಿವ, ಶಾಬೀರ್ ಅರ್ಕುಳ ಮೊದಲಾದವರು ರಕ್ತದಾನ ಮಾಡಿದರು. ಪ್ರಶಾಂತ್ ಕುಮಾರ್ ತುಂಬೆ ದೇವದಾಸ್ ಶೆಟ್ಟಿ ಕೊಡ್ಮಾನ್, ದೇವದಾಸ್ ಹೆಗ್ಡೆ, ರಿಕ್ಷಾ ಚಾಲಕ ಮಾಲಕ ಸಂಘದ ಅದ್ಯಕ್ಷ ಸುಲೈಮಾನ್, ನೀಲನ್ ಡಿಸೋಜಾ, ಸುನೀಲ್ ಫೆನಾಂಡೀಸ್, ಸುಕೇಶ್, ವಿಜೇತ್ ತುಂಬೆ ಮೊದಲಾದವರು ಸಹಕರಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ, ವಂದಿಸಿದರು. ಒಟ್ಟು 80 ಯುನಿಟ್ ರಕ್ತ ಸಂಗ್ರಹಿಸಲಾಯಿತು.