ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಪರಮೇಶ್ವರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿ.ಪಂ. ಸದಸ್ಯೆ ಮಂಜುಳ ಮಾಧವ ಮಾವೆ, ಡಾ. ವಿದ್ಯಾಸಾಗರ್, ಮಾಣಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಚಂದ್ರಾವತಿ ಮುಖ್ಯ ಅತಿಥಿಗಳಾಗಿದ್ದರು.
ಮಾಣಿ ಶ್ರೀ ನಾರಾಯಣ ಗುರು ಸೇವಾ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ ಪೂಜಾರಿ ಅನಂತಾಡಿ ಅವರನ್ನು ಸಮ್ಮಾನಿಸಲಾಯಿತು. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ಗೀತಾ ಚಂದ್ರಶೇಖರ, ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಸಂತ ಪೂಜಾರಿ, ಸುರೇಶ ಪೂಜಾರಿ ಸೂರ್ಯ, ದೈವದರ್ಶನದ ಪಾತ್ರಿ ಜಗದೀಶ ಪೂಜಾರಿ, ಸಂಘದ ಹತ್ತು ಗ್ರಾಮ ಸಮಿತಿಗಳ ಅಧ್ಯಕ್ಷರನ್ನು ಅಭಿನಂದಿಸಲಾಯಿತು.
ಸಂಘದ ಪದಾಧಿಕಾರಿಗಳಾದ ರಾಮಣ್ಣ ಪೂಜಾರಿ ಅರ್ಬಿ, ಸಂಜೀವ ಪೂಜಾರಿ ಇಡೆಮುಂಡೇವು ಅನಂತಾಡಿ, ಸುಷ್ಮಾ ಪ್ರಭಾಕರ್, ಕಾರ್ಯದರ್ಶಿ ರಾಜೇಶ್ , ಖಜಾಂಚಿ ರಮೇಶ್ ಪೂಜಾರಿ, ನಾರಾಯಣ ಪೂಜಾರಿ, ಮಾರಪ್ಪ ಸುವರ್ಣ ಕೆದಿಲ, ಶ್ರೀನಿವಾಸ ಪೂಜಾರಿ ಪೆರಾಜೆ, ದಯಾನಂದ ಪೂಜಾರಿ ಮಾಣಿ, ನಾಗೇಶ ಪೂಜಾರಿ ಪೆರಾಜೆ ಉಪಸ್ಥಿತರಿದ್ದರು. ಸಾಯಿ ಶಾಂತಿ ಮಣಿನಾಲ್ಕೂರು, ಸುರೇಶ್ ಶಾಂತಿ ಮಿತ್ತೂರು ಅವರು ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿದರು.ಸಂಘದ ಗೌರವ ಅಧ್ಯಕ್ಷ ಈಶ್ವರ ಪೂಜಾರಿ ಸ್ವಾಗತಿಸಿದರು. ಅಧ್ಯಕ್ಷ ನಾರಾಯಣ ಸಾಲಿಯಾನ್ ವಂದಿಸಿದರು. ಶಿಕ್ಷಕಿ ತ್ರಿವೇಣಿ ರಮೇಶ್ ಪೂಜಾರಿ, ಸತೀಶ್ ಪೂಜಾರಿ, ಪ್ರಶಾಂತ್ ಪಿ.ಎಲ್.ಕಾರ್ಯಕ್ರಮ ನಿರ್ವಹಿಸಿದರು.
ಅನ್ನ ಸಂತರ್ಪಣೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು