ವಿಟ್ಲ

ಆಳ್ವಾಸ್ ಪ್ರಥಮ, ಮೇಗಿನಪೇಟೆ ರೆಡ್ ಟ್ಯಾಗ್ ದ್ವಿತೀಯ

ಕಂಬಳಬೆಟ್ಟು ಸೌಹಾರ್ದ ಫ್ರೆಂಡ್ಸ್‌ನ ದಶಮಾನೋತ್ಸವದ ಪ್ರಯುಕ್ತ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನಡೆದ ಆಹ್ವಾನಿತ ತಂಡಗಳ ಪ್ರೋ ಮಾದರಿಯ ಹಗಲು ರಾತ್ರಿಯ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಮೂಡಬಿದಿರೆ ಆಳ್ವಾಸ್ ತಂಡ ಪ್ರಥಮ ಹಾಗೂ ವಿಟ್ಲ ಮೇಗಿನಪೇಟೆ ರೆಡ್ ಟ್ಯಾಗ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಫ್ರೆಂಡ್ಸ್ ಕಡಬ ಮೂರನೇ ಹಾಗೂ ಚಿಕ್ಕಮಗಳೂರಿನ ಕೊಪ್ಪ ತಂಡ ನಾಲ್ಕನೇ ಪ್ರಶಸ್ತಿ ಪಡೆದುಕೊಂಡಿದೆ. ಆಳ್ವಾಸ್ ತಂಡದ ಭರತ್ ಆಲ್ ರೌಂಡರ್, ರೆಡ್ ಟ್ಯಾಗ್ ತಂಡದ ಸುಶಾಂತ್ ಶೆಟ್ಟಿ ಉತ್ತಮ ದಾಳಿಗಾರ ಹಾಗೂ ಆಳ್ವಾಸ್ ತಂಡದ ಜಸ್ವಾಂತ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಜಾಹೀರಾತು

ಮಲಯಾಳಂ ಚಲನಚಿತ್ರ ನಟಿ ದಿಶಾ ದಿನಕರ್ ಪಂದ್ಯಾಟವನ್ನು ಉದ್ಘಾಟಿಸಿದರು. ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾ ಪಟುಗಳಾದ ಗಾಯತ್ರಿ, ಭರತ್, ರಶೀದ್ ಬನಾರಿ, ಅಬ್ದುಲ್ ರಹಿಮಾನ್, ಹಿರಿಯ ಕಬಡ್ಡಿ ಆಟಗಾರರಾದ ಜಬ್ಬಾರ್ ಅವರನ್ನು ಸನ್ಮಾನಿಸಲಾಯಿತು.

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ರಮಾನಾಥ ವಿಟ್ಲ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ ಮಾನ್ ಬಂಟ್ವಾಳ, ಬಂಟ್ವಾಳ ಪುರಸಭೆ ಸದಸ್ಯ ಇಕ್ಬಾಲ್ ಗೂಡಿನಬಳಿ, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಯಾನಂದ ಅಬೀರಿ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಅಬೂಬಕ್ಕರ್ ಒಕ್ಕೆತ್ತೂರು, ಇಸ್ಮಾಯಿಲ್ ಪೊಳ್ಯ, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಸೋಮಶೇಖರ್ ಶೆಟ್ಟಿ ಅಳಕೆಮಜಲು, ಹಾಜಿ ಮೊಹಿದ್ದೀನ್ ಶಾಫಿ, ರಶೀದ್ ವಿಟ್ಲ, ಅಬ್ದುಲ್ ರಹಿಮಾನ್ ಅದ್ರು, ಶುಶಾಂತ್ ಶೆಟ್ಟಿ ಮೂಡೈಮಾರ್, ನಾಸೀರ್ ಕೋಲ್ಪೆ, ಜಯಶೀಲ ಶೆಟ್ಟಿ ಮೂಡೈಮಾರ್, ಹಮೀದ್ ಮೌಲ ಕಬಕ, ಅಬ್ದುಲ್ ರಹಿಮಾನ್ ಕುರುಂಬಳ, ಹನೀಫ್ ಹಾಜಿ ಗೋಳ್ತಮಜಲು, ಶಾಹುಲ್ ಹಮೀದ್ ನೆಕ್ಕರೆ, ಈಶ್ವರ ಭಟ್ ಪಡ್ನೂರು, ಐ.ಸಿ ಕೈಲಾಸ್, ಶಮ್ಮೂನ್ ಪರ್ಲಡ್ಕ, ದಯಾನಂದ ಉಜಿರೆಮಾರ್, ಜಾಬೀರ್ ಅರಿಯಡ್ಕ, ಶರೀಫ್ ಬೀಟಿಗೆ, ತ್ಯಾಗರಾಜ್ ವಿಟ್ಲ, ಉಬೈದ್ ಮಂಗಳಪದವು, ಕಲಂದರ್ ಪರ್ತಿಪಾಡಿ, ಉಬೈದುಲ್ಲಾ ವಿಟ್ಲ ಬಝಾರ್, ನಝೀರ್ ಕಂಬಳಬೆಟ್ಟು, ಅಬ್ದುಲ್ ರಝಾಕ್ ಮೋನು, ರಘು ಕೆಲಿಂಜ, ಶಂಶುದ್ದೀನ್ ಕಂಬಳಬೆಟ್ಟು, ಶರೀಫ್ ಇಂಡಿಯನ್ ಆಟೋ ಲಿಂಕ್ಸ್, ಯೂಸುಫ್ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.ಶಾಕೀರ್ ಅಳಕೆಮಜಲು ಸ್ವಾಗತಿಸಿದರು. ಹಮೀದ್ ಕಂಬಳಬೆಟ್ಟು ವಂದಿಸಿದರು. ನೌಫಲ್ ಕುಡ್ತಮುಗೇರು, ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

2 hours ago