ತುಂಬೆ ಡ್ಯಾಂ ಪ್ರದೇಶಕ್ಕೆ ಖುದ್ದಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಿ.
ಈ ಮನವಿಯನ್ನು ಮನಪಾ ಕಮೀಷನರ್ ಅವರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಲ್ಲಿಸಿದ ಸಂದರ್ಭ ನಾಳೆಯೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದರು. ಆದರೆ ಇದುವರೆಗೂ ಬಂದಿಲ್ಲ ಎಂದು ಸಮಿತಿ ಆಪಾದಿಸಿದೆ.
ಪಟ್ಟಿಯಲ್ಲಿ ಇಲ್ಲದ ರೈತರ ಜಮೀನು ಕುರಿತು ನಗರಪಾಲಿಕೆ ಅಧಿಕಾರಿಗಳು ತಹಶೀಲ್ದಾರ್ ಮೂಲಕ ಕಂದಾಯ ಇಲಾಖಾಧಿಕಾರಿಗಳು ಜಂಟಿಯಾಗಿ ಪರಿಶೀಲಿಸುವುದಾಗಿ ತಿಳಿಸಿದ್ದರೂ ಶನಿವಾರದವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿ ಅಧಿಕಾರಿಗಳು ನೀರಿನ ಮಟ್ಟ ಗುರುತಿಸಿದ್ದು ಘೋಷಿಸಿದ ಪಟ್ಟಿಯಂತೆ ಸರಿಯಾಗಿದೆ ಎಂಬುದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿದ್ದು ಪಟ್ಟಿಯಲ್ಲಿದ್ದವರ, ಇಲ್ಲದವರ ಜಮೀನಿಗೆ ಒಳಚರಂಡಿ ಇಲಾಖಾ ಅಥವಾ ಕಂದಾಯ-ಮನಪಾ ಅಧಿಕಾರಿಗಳು ಈ ತನಕ ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ಆಪಾದಿಸಿದ್ದಾರೆ.