ಟ್ವಾಳ; ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸರ್ವಾಂಗೀಣ ಪ್ರಗತಿಹೊಂದಲು ಸಾಧ್ಯ. ವಿದ್ಯಾರ್ಥಿಯಾದವನು ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ, ದೈಹಿಕ ವಿಕಸನವನ್ನೂ ಹೊಂದಬೇಕು. ಇದಕ್ಕೆ ಕ್ರೀಡೆಗಳು ಸಹಕಾರಿ. ಉತ್ತಮ ಅರೋಗ್ಯ ಪಡೆಯಲು ಕ್ರೀಡೆಗಳಲ್ಲಿ ಪ್ರತಿಯೊಬ್ಬನು ತೊಡಗಿಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಆಟಗಾರ, ಬ್ಯಾಂಕ್ ಆಫ್ ಬರೋಡ, ಸುರತ್ಕಲ್ ಶಾಖೆ ಇದರ ಸೀನಿಯರ್ ಮ್ಯಾನೇಜರ್ ಉದಯ ಚೌಟ ಹೇಳಿದರು.
ಅವರು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಉತ್ತಮ ಉದ್ಯೋಗ ಪಡೆಯಲು ಸಾಧ್ಯ. ಕ್ರೀಡಾ ಸಾಧನೆಗೆ ಕಾರಣವಾದ ಈ ನೆಲದ ಋಣ ನಮ್ಮಲ್ಲಿದೆ ಎಂದವರು ಹೇಳಿದರು.
ಉದಯ ಚೌಟರನ್ನು ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜುಗಳ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಶಿಕಲಾ ಕೆ. ಅತಿಥಿ ಪರಿಚಯ ಮಾಡಿದರು. ಕಾಲೇಜಿನ ಕ್ರೀಡಾ ನಿರ್ದೇಶಕರಾದ ಲೆಪ್ಟಿನೆಂಟ್ ಸುಂದರ್ ಕೆ. ವಂದಿಸಿದರು. ಉಪನ್ಯಾಸಕರಾದ ಕಿಟ್ಟು ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಯೋಗಾಲಯದ ಹಿರಿಯ ಸಹಾಯಕರಾದ ಸುರೇಶ್ ಕೆ. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.