bantwalnews.com
ಸರಕಾರಿ ಶಾಲೆ ಉಳಿಸಿ ಆದೋಂದಲನ ನಡೆಸುತ್ತಿರುವ ಕರೆಂಕಿ ಶ್ರಿ ದುರ್ಗಾ ಫ್ರೆಂಡ್ಸ್ ಕ್ಲಬ್ ಮನೆ ಮನೆ ಭೇಟಿ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದೆ. ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ ಮುಂಜಾನೆ ಮನೆಭೇಟಿ ಅಭಿಯಾನ ನಡೆಸುತ್ತಿರುವ ಸದಸ್ಯರು ಈಗಾಗಲೇ 200 ಕ್ಕಿಂತ ಅಧಿಕ ಮನೆಗಳನ್ನು ಸಂದರ್ಶಿಸಿ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ದುರ್ಗಾ ಫ್ರೆಂಡ್ಸ್ ಕ್ಲಬ್‌ನ ದತ್ತು ಯೋಜನೆಯಡಿ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 1.5 ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಮುಂದಿನ ಎಪ್ರಿಲ್ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಮನೆ ಭೇಟಿ ಸಂದರ್ಭ ಪ್ರತೀ ಮನೆಯವರು ಸ್ವಯಂ ಪ್ರೇರಿತರಾಗಿ ತಮ್ಮ ಶಕ್ತಿ ಮೀರಿ ಸಹಾಯಧನ ನೀಡುತ್ತಿದ್ದಾರೆ. ಇದು ಕ್ಲಬ್‌ನ ಸದಸ್ಯರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಗುರುವಾರ ಬೆಳಿಗ್ಗೆ ಚೆಂಡ್ತಿಮಾರ್ ಪ್ರದೇಶದಲ್ಲಿ ಮನೆ ಭೇಟಿ ನಡೆಸಲಾಯಿತು.
ಒಂದು ವರ್ಷದ ಹಿಂದೆಯೇ ಸರಕಾರಿ ಶಾಲೆ ಉಳಿಸಿ ಆಂದೋಲನ ಆರಂಭಿದ್ದು ಇದೀಗ ಶಾಲೆಯ ಸುತ್ತಮುತ್ತಲಿನ ಗ್ರಾಮಗಳಿಗೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡು 200 ಮನೆಗಳನ್ನು ಸಂದರ್ಶಿಸಿದ್ದೇವೆ. ಸರಕಾರಿ ಶಾಲೆಯನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬಡವನ ಮನೆಯ ಮಕ್ಕಳಿಗೆ ಸರಕಾರಿ ಶಾಲೆ ಉಳಿಸಲು ಮನೆಮಂದಿಯಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಎಪ್ರಿಲ್ ತಿಂಗಳಿನಲ್ಲಿ ದಡ್ಡಲಕಾಡು ಸರಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದ್ದು ಅದಕ್ಕಿಂತ ಮುಂಚಿತವಾಗಿ ಗ್ರಾಮದ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಸರಕಾರಿ ಶಾಲೆ ಉಳಿಸುವ ಆಂದೋಲನ ನಡೆಸುತ್ತದ್ದೇವೆ ಎಂದು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.