bantwalnews.com report
ಮನೆ ಬಿಟ್ಟು ಹೊರಗಡೆ ಒಂದಷ್ಟು ದಿವಸ ಟೂರ್ ಹೋಗ್ತೀರಾ? ಚಿಂತೆ ಬಿಡಿ. ನಮ್ಮ ಸುರಕ್ಷತೆಗೆ ಮಂಗಳೂರು ಸಿಟಿ ಹಾಗೂ ದ.ಕ. ಪೊಲೀಸರಿದ್ದಾರೆ. ಜನರಿಗಾಗಿ ದಕ್ಷಿಣ ಕನ್ನಡ ಪೊಲೀಸರ ಗೃಹಸುರಕ್ಷಾ ಯೋಜನೆ ಇದಕ್ಕಾಗಿಯೇ ಇದೆ. ನಿಮ್ಮ ಮನೆ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ನೂತನ ಸೇವೆ ಇದು.
ನೀವು ಮಾಡಬೇಕಾದದ್ದು ಇಷ್ಟೇ. ಕೆಲ ದಿನ ಮನೆಗೆ ಬೀಗ ಹಾಕಿ ಹೋಗುವುದಿದ್ದರೆ. 9480805300 ನಂಬರ್ ಗೆ ವಾಟ್ಸಾಪ್ ಸಂದೇಶದಲ್ಲಿ ನಿಮ್ಮ ಮನೆ ವಿಳಾಸವನ್ನು ಕಳುಹಿಸಬೇಕು. ಪೊಲೀಸರು ನಿಮಗಾಗಿ ವಿಶೇಷ ಕೇರ್ ತೆಗೆದುಕೊಳ್ಳಲಿದ್ದಾರೆ. ಅದು ಹೇಗೆ ಎಂಬುದಕ್ಕೆ ಈ ವೀಡಿಯೋ ನೋಡಿ.