ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ಆಶ್ರಯದಲ್ಲಿ ಕಲ್ಲಡ್ಕದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಕಚೇರಿಯಲ್ಲಿ ಗೋಳ್ತಮಜಲು ಯುವಮೋರ್ಚಾ ಶಕ್ತಿಕೇಂದ್ರದ ಸಭೆಯು ನಡೆಯಿತು.
ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಗೋಳ್ತಮಜಲು ಯುವಮೋರ್ಚಾದ ಶಕ್ತಿಕೇಂದ್ರ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ರವಿರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕಡೇಶ್ವಾಲ್ಯ ಇವರನ್ನು ಆಯ್ಕೆ ಮಾಡಲಾಯಿತು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಇವರು ಯುವಮೋರ್ಚಾದ ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದರು. ಕ್ಷೇತ್ರ ಯುವಮೋರ್ಚಾದ ಉಪಾಧ್ಯಕ್ಷರಾದ ವಿನೀತ್ ಶೆಟ್ಟಿ ಉಪಸ್ಥಿತರಿದ್ದರು.
ರವಿರಾಜ್ ಗೋಳ್ತಮಜಲು- ಅಧ್ಯಕ್ಷರು, ಶರತ್ ನೀರಪಾದೆ –ಉಪಾಧ್ಯಕ್ಷ, ಸಂಪತ್ ಕಡೇಶ್ವಾಲ್ಯ- ಪ್ರಧಾನ ಕಾರ್ಯದರ್ಶಿ, ಅಶೋಕ ಮರ್ದೋಳಿ – ಕಾರ್ಯದರ್ಶಿ, ಲೋಕೇಶ್ ಶಂಭೂರು –ಕಾರ್ಯದರ್ಶಿ, ಪ್ರದೀಪ್ ಶಂಭೂರು , ನವೀನ, ಉತ್ತಮ , ಭಾಸ್ಕರ ಮುಂಡಾಲ, ಜಗದೀಶ ಅಂತರ, ದೇವದಾಸ್ ನಾಯಿಲ, ಹರೀಶ್ ಗೌಡ, ಸತೀಶ್ ಪೂಜಾರಿ ಸದಸ್ಯರಾಗಿ ಆಯ್ಕೆಗೊಂಡರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)