ವಿಟ್ಲ

ಕರಾಟೆಯಲ್ಲಿ ವಿವಿಧ ಪ್ರಶಸ್ತಿಗಳು

bantwalnews.com

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 9ನೇ ವೆಸ್ಟರ್ನ್ ನೇಶನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸ.ಮಾ.ಹಿ.ಪ್ರಾ.ಶಾಲೆ.ವಿಟ್ಲ ಇಲ್ಲಿನ ೬ನೇ ತರಗತಿಯ ಪ್ರಜ್ಞಾಕುಮಾರಿ, ವೈಟ್‌ಬೆಲ್ಟ್ ವಿಭಾಗದಲ್ಲಿ ಇಂಡಿವಿಜುವಲ್ ಕಟ, ಇಂಡಿವಿಜುವಲ್ ಕುಮಿಟ್ ಮತ್ತು ಗ್ರೂಪ್ ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಜಾಹೀರಾತು

ಎಂಟನೇ ತರಗತಿಯ ಶಶಾಂಕ ಆರೆಂಜ್ ಬೆಲ್ಟ್ ವಿಭಾಗದ ಗ್ರೂಪ್ ಕಟ ಮತ್ತು ಇಂಡಿವಿಜುವಲ್ ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.

ವಿಷ್ಣುಕಿಶೋರ ಏಳನೇ ತರಗತಿ ಗ್ರೀನ್ ಬೆಲ್ಟ್ ವಿಭಾಗದ ಗ್ರೂಪ್ ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.

ಲಿಖಿತ್ 6ನೇ ತರಗತಿ ವೈಟ್ ಬೆಲ್ಟ್ ವಿಭಾಗದ ಇಂಡಿವಿಜುವಲ್ ಕಟಾ ದ್ವಿತೀಯ ಹಾಗೂ ಗ್ರೂಪ್  ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ

6ನೇ ತರಗತಿಯ ಸುಧೀನ್ ಆಚಾರ್ಯ ವೈಟ್ ಬೆಲ್ಟ್‌ವಿಭಾಗದ ಇಂಡಿವಿಜುವಲ್ ಕಟಾ ತೃತೀಯ, ಗ್ರೂಪ್ ಕಟಾ ಪ್ರಥಮ ಸ್ಥಾನ ಪಡೆದಿರುತ್ತಾನೆ.

5ನೇ ತರಗತಿಯ ಸ್ವಸ್ತಿಕೃಷ್ಣ ಗ್ರೀನ್ ಬೆಲ್ಟ್ ವಿಭಾಗದ ಇಂಡಿವಿಜುವಲ್ ಕಟಾ ಪ್ರಥಮ ಹಾಗೂ ಗ್ರೂಪ್ ಕಟಾ ತೃತೀಯ ಸ್ಥಾನ ಗಳಿಸಿರುತ್ತಾನೆ. ಇವರಿಗೆ ಕರಾಟೆ ಶಿಕ್ಷಕರಾದ ಶ್ರೀಮಾಧವ ಅಳಿಕೆ ಇವರು ತರಬೇತಿ ನೀಡಿರುತ್ತಾರೆ. ಮೇಲಿನ ವಿದ್ಯಾರ್ಥಿಗಳು ಸ.ಮಾ.ಹಿ.ಪ್ರಾ,ಶಾಲೆ.ವಿಟ್ಲ. ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.