ಬಂಟ್ವಾಳ

ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವೇದಿಕೆ ಉತ್ತಮ ತಳಹದಿ

bantwalnews.com

ಭಾರತೀಯ ಸನಾತನ ಸಂಸ್ಕೃತಿಯಿಂದ ಬೆಳೆದು ಬಂದ ಸಂಗೀತ, ನೃತ್ಯಗಳಂತ ಕಲೆಗಳನ್ನು ಪ್ರೊತ್ಸಾಹಿಸಬೇಕು.  ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವೇದಿಕೆಯೇ ಉತ್ತಮ ತಳಹದಿಯನ್ನು ಒದಗಿಸುತ್ತದೆ. ದೊರಕಿದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಿ.ಸಿ.ರೋಡಿನ ವೈದ್ಯರಾದ ಡಾ.ಎಂ.ಎಸ್.ಭಟ್ ಹೇಳಿದರು.

ಅವರು ಇಲ್ಲಿನ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಸಂಗೀತ ನೃತ್ಯ ಕಾರ್‍ಯಕ್ರಮ ಸಂಸ್ಕೃತಿಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್‍ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರಗಳನ್ನು ಎಳವೆಯಲ್ಲಿಯೇ ಕಲಿಯಬೇಕು.  ಮಾತೃ ದೇವೋ ಭವ ಪಿತೃ ದೇವೋ ಭವ ಎಂಬ ಭಾವನೆಯನ್ನು ಹೊಂದಿರಬೇಕು ಎಂದರು.  ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್‍ಯಕ್ರಮದ ನಂತರ ಶಾಸ್ತ್ರೀಯ ಸಂಗೀತ, ಭರತನಾಟ್ಯ, ವಯೊಲೀನ್ ವಾದನ, ಹಾಮೋರ್ನಿಯಂ ವಾದನ, ಯಕ್ಷಗಾನ ಕಾರ್‍ಯಕ್ರಮಗಳು ನಡೆದವು.  9ನೇ ತರಗತಿಯ ಆಶಲ್ ಮಿನೇಜಸ್, ಜೆನಿವಾ ವೆಸ್ಲಿಯಾ ಕಾರ್‍ಯಕ್ರಮ ನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ