www.bantwalnews.com report
ದಕ್ಷಿಣ ಕನ್ನಡ ಜಿಲ್ಲೆಯ ಜೀವಜಲ ಉಳಿಸುವ ಸಲುವಾಗಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಪಶ್ಚಿಮಘಟ್ಟದ ಜೀವವೈವಿಧ್ಯ ಉಳಿಯಬೇಕಾದರೆ, ಪಶ್ಚಿಮವಾಹಿನಿ ಯೋಜನೆ ಜಾರಿಯಾಗಬೇಕು. ನದಿ ನೀರು ಸಂಗ್ರಹ ಹೆಚ್ಚಾಗುವುದರ ಜೊತೆಗೆ ಅಂತರ್ಜಲ ವೃದ್ಧಿಯೂ ಆಗುತ್ತದೆ ಎಂದು ರೈ ಹೇಳಿದರು.
ಹಿಂದೆ ಕಸ್ತೂರಿ ರಂಗನ್, ಗಾಡ್ಗೀಳ್ ವರದಿಗೂ ಆಕ್ಷೇಪಗಳಿತ್ತು. ಆದರೆ ಜನರಿಗೆ ತೊಂದರೆಯಾಗದಂತೆ ಹಾಗೂ ಅರಣ್ಯ ಉಳಿಸುವತ್ತ ನಮ್ಮ ಚಿಂತನೆ ನಡೆದಿದೆ ಎಂದು ರೈ ಹೇಳಿದರು.