bantwalnews.com report
ಮಿತ್ತನಡ್ಕದಲ್ಲಿ ಶುಕ್ರವಾರ ರಾತ್ರಿ ಸಾರ್ವಜನಿಕ ಶನೈಶ್ಚರ ಪೂಜೆ ಸಿದ್ದಪಡಿಸಿದ ಜಾಗದಲ್ಲಿ ಬೈಕ್‌ನಲ್ಲಿ ಓಡಿಸಿ ಧೂಳೆಬ್ಬಿಸಿದವನೆನ್ನುವ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿಯಲ್ಲಿ ರಾಜೇಶ್ ನಾಯಕ್ ಮತ್ತು ರಮೇಶ್ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡಿನೀಯ. ಹಲ್ಲೆ ನಡೆಸಿದ ಆರೋಪಿಗಳಿಗೆ ರಕ್ಷಣ ನೀಡದೆ ಡಿ.20ರೊಳಗೆ ಬಂಧಿಸದೇ ಇದ್ದಲ್ಲಿ ಉಗ್ರಹೋರಾಟ ಮಾಡುತ್ತೇವೆ ಎಂದು ವಿಟ್ಲ ತಾಲೂಕು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಹೇಳಿದರು.
ಹಿಂದು ಜಾಗರಣ ವೇದಿಕೆಯ ಸಹಸಂಚಾಲಕ ರಾಜೇಶ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಇನ್ನೋರ್ವ ಕಾರ್ಯಕರ್ತ ರಮೇಶ ಅವರೂ ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಸೋಮವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಪುತ್ತೂರು ಮಾತನಾಡಿ ಮಿತ್ತನಡ್ಕ ಭಾಗದಲ್ಲಿ ಗಾಂಜಾ ವ್ಯವಹಾರಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ, ಕರೋಪಾಡಿ ಘಟಕದ ಅಧ್ಯಕ್ಷ ವಿನೋದ ಶೆಟ್ಟಿ ಪಟ್ಲ, ನಿಧಿ ಪ್ರಮುಖ ಸುದರ್ಶನ ಆಳ್ವ, ತಾಲೂಕು ಸಹ ಸಂಚಾಲಕ ಗಣರಾಜ ಭಟ್ ಕೆದಿಲ, ತಾ.ಕಾರ್ಯದರ್ಶಿ ಮನೋಜ್ ಪೆರ್ನೆ ಉಪಸ್ಥಿತರಿದ್ದರು.