ದೇಶದ ಹಿತ ದೃಷ್ಠಿಯಿಂದ ನಡೆಯುವ ಬದಲಾವಣೆಯನ್ನು ತಾಳಿಕೊಳ್ಳಬೇಕು ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶಿರ್ವಚನ ನೀಡಿ ಯುವ ಶಕ್ತಿ ಸಂಸ್ಕಾರಗೊಂಡು ನಮ್ಮನ್ನು ನಾವೇ ಕಾಪಾಡಿಕೊಳ್ಳುವಂತಾಗ ಬೇಕು ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಶೇಖರಾನಂದ ಸ್ವಾಮೀಜಿ ಆಶೀರ್ವಚನ ಮಾಡಿ ಮತಾಂತರ, ಗೋಹತ್ಯೆ, ಉಗ್ರಗಾಮಿ ಚಟುವಟಿಕೆಗೆ ಬ್ರೇಕ್ ಬಿದ್ದಿದೆ. ಹಿಂದು ಸಮಾಜದಲ್ಲಿ ನಿರಂತರ ಜಾಗೃತಿ ಯಾಗಬೇಕು ಎಂದರು.
ಕನ್ಯಾನ ಬಾಳೆಕೋಡಿ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಆಶಿರ್ವಚನ ನೀಡಿ ಹೃದಯ ವೈಶಾಲ್ಯತೆಯಿಂದ ಹಿಂದು ಸಮಾಜ ಒಟ್ಟಾಗಬೇಕು. ಏಕ ಸೂತ್ರದಲ್ಲಿ, ಹಿಂದುತ್ವದ ಆದಾರದಲ್ಲಿ ಸಮಾಜ ಸಂಘಟನೆಗೊಂಡು ಸಶಕ್ತವಾದಾಗ ಭಾರತ ಜಗದ್ವಂದ್ಯವಾಗುವುದು ಎಂದು ತಿಳಿಸಿದರು.
ಯುವ ಬ್ರಿಗೇಡ್ ನ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕ ವಂಶಿ ಮುಖ್ಯ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಪ್ರಗತಿ ಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ವಹಿಸಿದ್ದರು.
ಮಾಜಿ ಸೈನಿಕರಾದ ವಿಠಲ ಶೆಟ್ಟಿ ಅಗರಿ, ಗೋಪಾಲಕೃಷ್ಣ ಭಟ್, ರಂಗನಾಥ ರೈ, ಎಸ್, ಉದಯ ಕುಮಾರ್ ರಾವ್ ಲಿಂಗಪ್ಪ ಗೌಡ ಸೆರ್ಕಳ ಅವರನ್ನು ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ ಸುಪ್ರೀತಾ ಪೂಜಾರಿ ಅವರನ್ನು ಗೌರವಿಸಲಾಯಿತು. ಸಮಾಜ ಸೇವಕ ದಾಮೋದರ ರೈ ಬಾರೆ ಬೆಟ್ಟು ಅವರನ್ನು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೆರ್ಡೂರು ಮೇಳದ ಭಾಗವತ ರಾಘವೇಂದ್ರ ಅವರನ್ನು ಗೌರವಿಸಲಾಯಿತು.
ಧರ್ಮ ಜಾಗೃತಿ ಪ್ರಮುಖ ಅರುಣ ಕುಮಾರ್ ಪುತ್ತಿಲ, ರತ್ನಾಕರ ಶೆಟ್ಟಿ, ಉದ್ಯಮಿ ಜನಾರ್ದನ ಅರ್ಕುಳ, ವಿಕಾಸ ಕುಮಾರ್, ಸೂರಪ್ಪ ಕಾಡುಮಠ, ಧರ್ಮಸ್ಥಳ ಯೋಜನೆಯ ನವೀನ ಶೆಟ್ಟಿ ಭಾಗವಹಿಸಿದ್ದರು.
ಸುಪ್ರೀತಾ, ಸುಷ್ಮಿತಾ ಪ್ರಾರ್ಥನೆ ಹಾಡಿದರು. ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು. ಸಂಚಾಲಕ ರಮೇಶ ಶೆಟ್ಟಿ ನಂದ್ರಬೈಲು ಪ್ರಾಸ್ತಾವಿಸಿದರು. ರೋಹಿತ್ ಅಗರಿ ವಂದಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ಸನ್ಮಾನ ಪತ್ರ ವಾಚಿಸಿದರು. ರಾಜ್ಯೊತ್ಸವ ಪ್ರಶಸ್ತಿ ವಿಜೇತ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು.