ಜಿಲ್ಲಾ ಸುದ್ದಿ

ಶ್ರೀ ಕ್ಷೇತ್ರ ಒಡಿಯೂರು ಶ್ರೀ ಮಾತಾನಂದಮಯೀ ಅವರಿಂದ ಅಕ್ಷತಾ ಅಭಿಯಾನಕ್ಕೆ ಚಾಲನೆ

ಗೋಯಾತ್ರಾ~ಮಹಾಮಂಗಲದ ಯಶಸ್ಸಿಗಾಗಿ ಭಾನುವಾರ ಬೆಳಿಗ್ಗೆ ಮಂಗಳೂರಿನ ಶ್ರೀ ಭಾರತೀ ಮಹಾವಿದ್ಯಾಲಯದ ಶಂಕರಶ್ರೀಯಲ್ಲಿ ಕಾಮಧೇನು ಹವನ ಜರಗಿ ಸಮಾರಂಭದ ಯಶಸ್ಸಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

ಮಾತಾನಂದಮಯೀ ಶ್ರೀ ಕ್ಷೇತ್ರ ಒಡಿಯೂರು ಅವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರಗಿತು. ಅವರು ಮಂಗಲೋತ್ಸವದ ಬಗ್ಗೆ ಅನುಗ್ರಹ ನುಡಿಗಳನ್ನಾಡಿ ವಿವಿಧ ಸಾಮಾಜಿಕ ಸಂಘಟನೆಗಳಿಗೆ ಅಭಿಯಾನದ ಕಿಟ್ ಗಳನ್ನು ಅನುಗ್ರಹಿಸಿ ಅಕ್ಷತಾಭಿಯಾನಕ್ಕೆ ಚಾಲನೆ ನೀಡಿದರು.

ಜಾಹೀರಾತು

ಭಾರತೀಯ ಗೋ ತಳಿಗಳ ಸಂರಕ್ಷಣೆಗಾಗಿ ಆಂದೋಲನದ ರೂಪದಲ್ಲಿ ಮಂಗಲಗೋಯಾತ್ರೆ  ಸಪ್ತ ರಾಜ್ಯಗಳಲ್ಲಿ ನಡೆಯುತ್ತಿದೆ. ಗೋಯಾತ್ರಾ ಮಹಾಮಂಗಲ ಕಾರ್ಯಕ್ರಮ ಕೂಳೂರು ಮೈದಾನದಲ್ಲಿ ಜನವರಿ 27, 28, 29, 2017ರಂದು ನಡೆಯಲಿದೆ. 2000 ಸಂತರು ಮತ್ತು 2 ಲಕ್ಷ ಜನರು ಭಾಗವಹಿಸಲಿರುವ ಈ ಮಹಾಮಂಗಲೋತ್ಸವಕ್ಕೆ ಮಂಗಳೂರಿನ  80000ಕ್ಕೂ ಹೆಚ್ಚಿನ ಮನೆಗಳಿಗೆ ಅಕ್ಷತೆಯೊಂದಿಗೆ ಆಮಂತ್ರಣ ನೀಡುವ ಮಹತ್ಕಾರ್ಯ ಮಾತೃ ವೃಂದದ ನೇತೃತ್ವದಲ್ಲಿ ಜರಗಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಅಧ್ಯಕ್ಷೆ ಕೆ. ಟಿ.ಶೈಲಜಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಾ ಪ್ರಶಾಂತ ಪೈ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಸಮತಾ ಮಹಿಳಾ ಬಳಗದ ಅಧ್ಯಕ್ಷೆ ರಾಜಶ್ರೀ ಆಚಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಹಾ ಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಸಮಾರಂಭದ ಸಮಗ್ರ ಮಾಹಿತಿಗಳನ್ನಿತ್ತರು. ವೀಣಾ ಗಣೇಶ ಪ್ರಸಾದ್, ಲಕ್ಷ್ಮಿ ಪ್ರಕಾಶ್ ಪ್ರಾರ್ಥನೆ ಮಾಡಿದರು. ಜಯಲಕ್ಷ್ಮಿ ಕುಕ್ಕಿಲ ಸ್ವಾಗತ ಮತ್ತು  ಲೀಲಾವತಿ ರಾಘವೇಂದ್ರ ಧನ್ಯವಾದವಿತ್ತರು. ಸುಮಾ ರಮೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.