www.bantwalnews.com report
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುಣಚ ಗ್ರಾಮ ಪಂಚಾಯಿತಿ, ಯುವಜನ ಒಕ್ಕೂಟ ಬಂಟ್ವಾಳ, ಪುಣಚ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಯುವಜನ ಮೇಳ 2016-17 ಯುವಕರ ವಿಭಾಗದಲ್ಲಿ 71 ಅಂಕಗಳೊಂದಿಗೆ ನರಿಂಗಾನ ಯಶಸ್ವಿ ಕಲಾ ನಿಕೇತನ, ಯುವತಿಯರ ವಿಭಾಗದಲ್ಲಿ 107 ಅಂಕಗಳೊಂದಿಗೆ ನವಚೇತನ ಯುವತಿ ಮಂಡಲ ಅಳಿಕೆ ಸಮಗ್ರ ಪ್ರಶಸ್ತಿಯನ್ನು ಪಡೆಕೊಂಡಿತು.
ಭಾವಗೀತೆ:
ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲದ ಪೂಜಾ, ದ್ವಿತೀಯ ಸ್ಥಾನ ಕುಳಾಲು ವಾರಾಯಿ ಯುವ ವೃಂದದ ಸಪ್ನಾಜ್ ಪಡೆದುಕೊಂಡರು. ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಕುಳಾಲು ವಾರಾಯಿ ಯುವಕ ಮಂಡಲದ ಪ್ರಜ್ವಲ್, ದ್ವಿತೀಯ ಸ್ಥಾನ ಅಳಿಕೆ ಚೆಂಡುಕಳ ಯುವಕ ಮಂಡಲದ ಸಂಜೀವ ಪಡೆದುಕೊಂಡರು.
ಲಾವಣಿ:
ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲದ ಅಮಿತ, ದ್ವಿತೀಯ ಸ್ಥಾನ ಪಟಿಕಲ್ಲು ಯುವತಿ ಮಂಡಲದ ಸೀತಾ ಪಿ ಪಡೆದರು.
ರಂಗ ಗೀತೆ :
ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲದ ಪೂಜಾ, ದ್ವಿತೀಯ ಸ್ಥಾವನವನ್ನು ಅಮಿತ ಪಡೆದುಕೊಂಡರು. ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಮೂಡಂಬೈಲು ಮಹಿಷ ಮರ್ದಿನಿ ಯುವಕ ಮಂಡಲ, ದ್ವಿತೀಯ ಸ್ಥಾನ ಅಳಿಕೆ ಚೆಂಡುಕಳ ಯುವಕ ಮಂಡಲ ಪಡೆಯಿತು.
ಏಕಪಾತ್ರಭಿನಯ:
ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲದ ಅಮಿತ, ದ್ವಿತೀಯ ಸ್ಥಾನವನ್ನು ತೇಜಸ್ವಿನಿ ಪಡೆದರು.
ತುಳು ಭಾವಗೀತೆ :
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಮೂಡಂಬೈಲು ಮಹಿಷ ಮರ್ದಿನಿ ಯುವಕ ಮಂಡಲ, ದ್ವಿತೀಯ ಸ್ಥಾನ ಅಳಿಕೆ ಚೆಂಡುಕಳ ಯುವಕ ಮಂಡಲ ಪಡೆಯಿತು. ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲದ ಅಮಿತ, ದ್ವಿತೀಯ ಸ್ಥಾನವನ್ನು ಪೂಜಾ ಗಳಿಸಿದರು.
ಗೀಗೀ ಪದ:
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಮೂಡಂಬೈಲು ಮಹಿಷ ಮರ್ದಿನಿ ಯುವಕ ಮಂಡಲ, ದ್ವಿತೀಯ ಸ್ಥಾನ ಕೂಳಾಲು ವಾರಾಹಿ ಯುವಕ ವೃಂದ ಪಡೆಯಿತು. ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲ, ದ್ವಿತೀಯ ಸ್ಥಾನ ಕುಳಾಲು ವಾರಾಹಿ ಯುವತಿ ವೃಂದ ಪಡೆಯಿತು.
ಭಜನೆ:
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಮೂಡಂಬೈಲು ಮಹಿಷ ಮರ್ದಿನಿ ಯುವಕ ಮಂಡಲ, ದ್ವಿತೀಯ ಸ್ಥಾನ ನರಿಂಗಾನ ಯಶಸ್ವಿ ಕಲಾ ನಿಕೇತನ ಪಡೆಯಿತು. ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲ, ದ್ವಿತೀಯ ಸ್ಥಾನ ಮಂಚಿಕುಕ್ಕಾಜೆ ಯುವತಿ ಮಂಡಲ ಗಳಿಸಿತು.
ತುಳು ಪಾಡ್ದನ:
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಮೂಡಂಬೈಲು ಮಹಿಷ ಮರ್ದಿನಿ ಯುವಕ ಮಂಡಲ, ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲ ಗಳಿಸಿತು.
ತುಳು ಜಾನಪದ ಕುಣಿತ:
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ನರಿಂಗಾನ ಯಶಸ್ವಿ ಕಲಾ ನಿಕೇತನ, ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲ ಪಡೆಯಿತು.
ಕೋಲಾಟ:
ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ವಾರಾಹಿ ಯುವತಿ ವೃಂದ ಕುಳಾಲು, ದ್ವಿತೀಯ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲ ಗಳಿಸಿತು. ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ನರಿಂಗಾನ ಯಶಸ್ವಿ ಕಲಾನಿಕೇತನ, ದ್ವಿತೀಯ ಸ್ಥಾನ ಮೂಡಂಬೈಲು ಮಹಿಷ ಮರ್ದಿನಿ ಯುವಕ ಮಂಡಲ ಪಡೆಯಿತು.
ಜಾನಪದ ಗೀತೆ:
ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನ ಕುಳಾಲು ವಾರಾಹಿ ಯುವಕ ವೃಂದ, ದ್ವಿತೀಯ ಸ್ಥಾನ ನರಿಂಗಾನ ಯಶಸ್ವಿ ಕಲಾ ನಿಕೇತನ ಪಡೆಯಿತು. ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅಳಿಕೆ ನವಚೇತನ ಯುವತಿ ಮಂಡಲ, ದ್ವಿತೀಯ ಸ್ಥಾನ ಕುಳಾಲು ವಾರಾಹಿ ಯುವತಿ ವೃಂದ ಪಡೆಯಿತು.