ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಅಧ್ಯಯನ ಮಂಡಳಿ ಹಾಗು ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ- ವಿಕಾಸದ ವತಿಯಿಂದ ಒಂದು ದಿನದ ಪಠ್ಯಪುಸ್ತಕ ರಚನಾ ಕಾರ್ಯಾಗಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಡಿಸೆಂಬರ್ 20, ಮಂಗಳವಾರ ನಡೆಯಲಿದೆ.
ಈ ಕಾರ್ಯಾಗಾರಕ್ಕೆ ಭಾಗವಹಿಸುವ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಿಗೆ ಅನ್ಯ ಕಾರ್‍ಯ ನಿಮಿತ್ತ ರಜೆಯ ಸೌಲಭ್ಯವಿದೆ ಎಂದು ವಿಕಾಸದ ಅಧ್ಯಕ್ಷ ಡಾ. ನಾಗಪ್ಪ ಗೌಡ ತಿಳಿಸಿದ್ದಾರೆ ಎಂದು ವಿಕಾಸ ಕಾರ್ಯದರ್ಶಿ ಡಾ.ಯೋಗೀಶ ಕೈರೋಡಿ ತಿಳಿಸಿದ್ದಾರೆ.