ಬಂಟ್ವಾಳನ್ಯೂಸ್ ವರದಿ
ಪ್ರಾಸ ಮತ್ತು ಲಯದಿಂದ ಕವನದ ಸೊಗಸು ಹೆಚ್ಚುತ್ತದೆ ಎಂದು ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಅನಂತ ಕೃಷ್ಣಹೆಬ್ಬಾರ್ ಹೇಳಿದರು.
ವಿಟ್ಲದ ವಿಠಲ ಪ್ರೌಢ ಶಾಲೆ ಹಾಗೂ ವಿಟ್ಲದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗಾಗಿ ವಿಠಲ ಪ್ರೌಢಶಾಲಾ ಸಾಹಿತ್ಯ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಲೋಕ ಬಂಟ್ವಾಳ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ನಡೆದ ಸಾಹಿತ್ಯ ರಚನಾ ಪ್ರೇರಣಾ ಕಮ್ಮಟ ಕಾರ್ಯಕ್ರಮದಲ್ಲಿ ಕವನ ರಚನೆಯಲ್ಲಿ ಪ್ರಾಸ, ಲಯದ ಮಹತ್ವ ಮತ್ತು ಛಂದಸ್ಸಿನ ಬಗೆಗಿನ ವಿವರ ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ದ ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಮಾರ್ ಕಾಸರಗೋಡು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ‘ಮಕ್ಕಳ ಲೋಕ’ದ ಅಧ್ಯಕ್ಷ ಭಾಸ್ಕರ ಅಡ್ವಾಳ ಹಾಗೂ ಸಂಘಟನಾ ಕಾರ್ಯದರ್ಶಿ ರಾಜಾರಾಮ ವರ್ಮ ಸಹಕರಿಸಿದರು.
ಅಧ್ಯಕ್ಷತೆ ವಹಿಸಿದ ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ಪ್ರಸ್ತಾವಿಸಿದರು. ಶಿಕ್ಷಕಿ ಗೀತಾ ವಂದಿಸಿದರು. ಶಿಕ್ಷಕಿ ಸೀತಾಲಕ್ಷ್ಮಿ ವರ್ಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಚಂದ್ರಕಲಾ ಮತ್ತು ಭಾರತಿ ಉಪಸ್ಥಿತರಿದ್ದರು.