ವಿಟ್ಲ: ಕರೋಪಾಡಿ ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಶಾಖೆಯ 3 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಲ್ಸೇ ಮೀಲಾದ್ ಕಾರ್ಯಕ್ರಮ ಡಿ.19ರ ಸಂಜೆ 5 ಗಂಟೆಗೆ ಕರೋಪಾಡಿ ಮಸೀದಿ ಬಳಿ ನಡೆಯಲಿದೆ. ಸಂಜೆ 7 ಗಂಟೆಗೆ ತ್ರಿಷೂರ್‌ನ ಮುಳ್ಳೂರ್‌ಕರೆ ಮುಹಮ್ಮದಲಿ ಸಖಾಫಿ ಅವರು ಪ್ರಮುಖ ಪ್ರಭಾಷಣೆ ನಡೆಸಲಿರುವರು ಎಂದು ಎಸ್‌ವೈಎಸ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ಸಅದಿ ಹೇಳಿದರು.
ಅಧ್ಯಕ್ಷತೆಯನ್ನು ಕರೋಪಾಡಿ ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ವಹಿಸಲಿದ್ದು, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮರ್ ಸಖಾಫಿ ಕಂಬಳಬೆಟ್ಟು ಉದ್ಘಾಟಿಸಲಿದ್ದಾರೆ. ಕರೋಪಾಡಿ ಬ್ರಾಂಚ್ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಶಂಸುದ್ದೀನ್ ತಂಙಳ್ ಗಾಂಧಿನಗರ್ ದುಆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್, ಸದಸ್ಯರಾದ ಕೆ.ಪಿ. ಸೀತಾರಾಮ್ ಭಟ್ ಕೊಡಂಗೆ, ದಿನೇಶ್ ಶೆಟ್ಟಿ, ಮನಮಾಠಿ ಬೀಬಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಚೇಯರ್ ಮಾನ್ ಡಿಎಂಕೆ ಮುಹಮ್ಮದ್, ಮುದರ್ರಿಸ್‌ಗಳಾದ ಅಬ್ದುಲ್ ಹಕೀಂ ಮದನಿ, ಇಬ್ರಾಹಿಂ ಫೈಝಿ, ಅಬೂಬಕ್ಕರ್ ಫೈಝಿ ಪೆರುವಾಯಿ, ಮುಹಮ್ಮದಲಿ ಫೈಝಿ ಮೊದಲಾದವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಆಸನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಹಿಳೆಯರಿಗೆ ಪ್ರತ್ಯೇಕ ಸ್ಥಳವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ, ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ಹಮೀದ್, ಸದಸ್ಯರಾದ ಇಸ್ಮಾಯಿಲ್ ಮುಡಿಂಞಮಾರ್, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…