ನಿಮ್ಮಲ್ಲಿ ತೆರಿಗೆ ಪಾವತಿಸದೇ ಬಾಕಿ ಇಟ್ಟ ಹಣ ಇದ್ದರೆ ಟೆನ್ಶನ್ ಬೇಡ. ಕಪ್ಪು ಬಿಳಿ ಮಾಡಿಕೊಳ್ಳಲು ಇದೆ ಮಾರ್ಚ್ 31, 2017ರವರೆಗೆ ಅವಕಾಶ!
ಕೇಂದ್ರ ಸರ್ಕಾರ ಕಳೆದ ತಿಂಗಳು ಶೇ.50 ತೆರಿಗೆ ಕಟ್ಟಿ ಕಪ್ಪು ಬಿಳಿ ಮಾಡಿಕೊಳ್ಳಲು ರೂಪಿಸಿದ್ದ ಹೊಸ ಕಾನೂನು ಪ್ರಕಾರ ಕಪ್ಪು ಬಿಳಿ ಮಾಡಿಕೊಳ್ಳಲು ಕಪ್ಪು ಕುಳಗಳಿಗೆ ಮಾರ್ಚ್ 31, 2017ರವರೆಗೆ ಅವಕಾಶ ನೀಡಿದೆ.
ಕಪ್ಪು ಹಣ ಘೋಷಣೆ ಯೋಜನೆಯಡಿ ಕನಿಷ್ಠ ಶೇ.50 ರಷ್ಟು ತೆರಿಗೆ ಹಾಗೂ ದಂಡ ಕಟ್ಟಿ ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಬಹುದು. ಈ ಯೋಜನೆಯಡಿ ಕಪ್ಪು ಹಣ ಘೋಷಿಸಿಕೊಳ್ಳುವವರ ವಿವರವನ್ನು ಗೌಪ್ಯವಾಗಿಡಲಾಗುವುದು. ಮತ್ತು ಈ ಮಾಹಿತಿಯನ್ನು ಪ್ರಾಸಿಕ್ಯೂಷನ್ ಗಾಗಿ ಬಳಿಸಿಕೊಳ್ಳುವುದಿಲ್ಲ.
ಜನರೂ ಕಪ್ಪು ಹಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬಹುದು ಎಂದ ಅವರು, ಈ ಸಂಬಂಧ ಇ-ಮೇಲ್ ಐಡಿ ನೀಡಲಾಗಿದ್ದು, blackmoneyinfo@incometax.gov.in ಗೆ ಮಾಹಿತಿ ನೀಡಬಹುದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ ಮೂರು ವಾರಗಳ ನಂತರ ವಿತ್ತ ಸಚಿವ ಅರುಣ್ ಜೇತ್ಲಿ ಅವರ ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು.