ಇನ್ನು ಎಪಿಎಂಸಿ ಫೈಟ್ ಗೆ ಪಕ್ಷಗಳ ತಯಾರಿ

ಜನವರಿ 12ರಂದು ಚುನಾವಣೆ, 14ರಂದು ಮತ ಎಣಿಕೆ

ಕೋರ್ಟು ತಡೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬಂಟ್ವಾಳ ಎಪಿಎಂಸಿ ಚುನಾವಣೆಗೆ ಮತ್ತೆ ದಿನ ನಿಗದಿಯಾಗಿದೆ.
ಜನವರಿ 12ರಂದು ಮತದಾನ ನಡೆಯಲಿದೆ. ಡಿ.22ರಿಂದ 29ವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಇದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ನಾಮಪತ್ರ ಸ್ವೀಕಾರ ಕೇಂದ್ರ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕೃಷಿ ಅಧಿಕಾರಿ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳು ಆಗಿರುತ್ತಾರೆ.
ಡಿ.30ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೇ ದಿನ ಜನವರಿ 2. ಜನವರಿ 12ಕ್ಕೆ ಅವಶ್ಯವಿದ್ದರೆ ಮತದಾನ. 13ರಂದು ಅವಶ್ಯವಿದ್ದಲ್ಲಿ ಮರುಮತದಾನ, 14ರಂದು ಮತ ಎಣಿಕೆ ನಡೆಯಲಿದೆ.
ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು.
ಈ ಚುನಾವಣೆ ಗ್ರಾ.ಪಂ.ಚುನಾವಣೆ ಮಾದರಿಯಲ್ಲಿ ಪಕ್ಷದ  ಚಿಹ್ನೆಯಡಿ ನಡೆಯುತ್ತಿಲ್ಲವಾದರೂ,ವಿವಿಧ ಪಕ್ಷದ  ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಹಿಡಿದು ಪ್ರಚಾರದಲ್ಲೂ ಮುಂಚೂಣಿಯಲ್ಲಿರುತ್ತಾರೆ. ನೋಂದಾಯಿತ ಕೃಷಿಕರು, ವರ್ತಕರು ಮತದಾರರು.
ಕ್ಷೇತ್ರಗಳು ಹೀಗಿವೆ.
1. ಸಂಗಬೆಟ್ಟು (ಸಾಮಾನ್ಯ, ಮತದಾರರು-3997),
2. ಚನ್ನೈತೋಡಿ (ಸಾಮಾನ್ಯ ಮಹಿಳೆ, ಮತದಾರರು-3903),
3. ಅಮ್ಟಾಡಿ (ಹಿ.ವ.ಅ, ಮತದಾರರು-4715),
4. ಕಾವಳಮೂಡೂರು (ಸಾಮಾನ್ಯ, ಮತದಾರರು-4346),
5. ಕೊಳ್ನಾಡು (ಹಿ.ವ.ಬಿ.,ಮತದಾರರು-3890),
6. ಅಳಕೆ(ಹಿ.ವ.ಬಿ.ಮಹಿಳೆ, ಮತದಾರರು-4054),
7. ಕೆದಿಲ(ಅನುಸೂಚಿತ ಪಂಗಡ, ಮತದಾರರು-3946),
8. ಮಾಣಿ(ಸಾಮಾನ್ಯ, ಮತದಾರರು-4768),
9. ಕಡೇಶ್ವಾಲ್ಯ (ಸಾಮಾನ್ಯ , ಮತದಾರರು-3772),
10. ಪಾಣೆಮಂಗಳೂರು (ಸಾಮಾನ್ಯ , ಮತದಾರರು-4004),
11. ತುಂಬೆ (ಅನುಸೂಚಿತ ಜಾತಿ,ಮತದಾರರು-4402),
12. ವರ್ತಕರ ಕ್ಷೇತ್ರ (ಮತದಾರರು-204)
ಇಲ್ಲಿ ನೋಂದಾಯಿತ ವರ್ತಕರು ಯಾರೊಬ್ಬರು ಚುನಾವಣೆಗೆ ಸ್ಪಧಿ೯ಸಬಹುದು. ಒಟ್ಟು 46001 ಮಂದಿ ತಮ್ಮಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.
ಕೃಷಿಕರು, ವರ್ತಕರ ಅನುಕೂಲಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟು ಬಿಜೆಪಿ ತಮ್ಮ ಬೆಂಬಲಿತ ಅಭ್ಯಥಿ೯. ಪರ ಮತಯಾಚನೆ ಮಾಡಲಿದ್ದರೆ, ರಾಜ್ಯ ಸರಕಾರ ಕೃಷಿಕರಿಗೆ ಜಾರಿ ತಂದಿರುವ ಯೋಜನೆಯನ್ನು ಮುಂದಿಟ್ಟು ಕಾಂಗ್ರೆಸ್ ತಮ್ಮ ಬೆಂಬಲಿತರ ಪರ ಮತಯಾಚನೆ ಮಾಡಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ತವರು ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ಸಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿಯೂ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೂಳ್ಳುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನಾಗಿಸಿದೆ.
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts