ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ಆಶ್ರಯದಲ್ಲಿ ಬಿ.ಸಿ.ರೋಡಿನ ಬಿಜೆಪಿ ಕಛೇರಿಯಲ್ಲಿ ಸಜಿಪಮುನ್ನೂರು ಯುವಮೋರ್ಚಾ ಶಕ್ತಿಕೇಂದ್ರದ ಸಭೆಯು 14ರಂದು ಸಂಜೆ 5.30 ಕ್ಕೆ ನಡೆಯಿತು.
ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.ಸಜಿಪಮುನ್ನೂರು ಯುವಮೋರ್ಚಾದ ಶಕ್ತಿಕೇಂದ್ರ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಕಿಶೋರ್ ಪಲ್ಲಿಪಾಡಿ,ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕೋಟ್ಯಾನ್ ಸಜಿಪಮೂಡ ಇವರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಇವರು ಯುವಮೋರ್ಚಾದ ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದರು. ಕ್ಷೇತ್ರ ಯುವಮೋರ್ಚಾದ ಉಪಾಧ್ಯಕ್ಷರಾದ ರಂಜಿತ್ ಮೈರ ಹಾಗೂ ಕಾರ್ಯದರ್ಶಿಗಳಾದ ಲೋಕೇಶ್ ಭರಣಿ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…