ಬಂಟ್ವಾಳ: ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ವೆಸ್ಟರ್ನ್ ಇನ್ಸ್ಟಿಟೈಟ್ ಆರ್ಪ ಮಾರ್ಷಲ್ ಆರ್ಟ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದ ವೈಟ್ ಬೆಲ್ಟ್ ವಿಭಾಗದ ವೈಯಕಿಕ ಕುಮಿಟೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ವಿಕೇಶ್‌ನನ್ನು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.
ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಶಾಲು ಹೊದಿಸಿ ಅಭಿನಮದಿಸಿದರು. ಅವರು ಮಾತನಾಡಿ ಸರಕಾರಿ ಶಾಲೆಯ ವಿದ್ಯಾರ್ಥಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವುದು ಹೆಮ್ಮೆ ತಂದಿದೆ. ಈ ಪ್ರೇರಣೆ ಪಡೆದು ಸರಕಾರಿ ಶಾಲೆಗಳ ಎಲ್ಲಾ ವಿಧ್ಯಾರ್ಥಿಗಳು ಸಾಧನೆ ಮಾಡುವಂತೆ ಅವರು ಆಶಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಸದಸ್ಯ ರಾಮಚಂದ್ರ ಕರೆಂಕಿ, ಕರಾಟೆ ತರಬೇತುದಾರ ಅಶೋಕ್ ಆಚಾರ್ಯ ಹಾಜರಿದ್ದರು.