ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಜ.14 ರಿಂದ ಜ.21 ರವರೆಗೆ ನಡೆಯಲಿರುವ ಕಾಸರಗೋಡು ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗೆ ನಾಟಕ ಕೃತಿ ಮತ್ತು ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಸಾಲ್ಯಾನ್ ಅವರು ತಿಳಿಸಿದ್ದಾರೆ.
ಮಿತ್ರ ಮಂಡಳಿ ಸಭಾಂಗಣದಲ್ಲಿ ವಿವಿಧ ತಂಡಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಚೀಟಿ ಎತ್ತುವ ಮೂಲಕ ತಂಡಗಳಿಗೆ ಸ್ಪರ್ಧಾ ದಿನಾಂಕ ನಿಗದಿಪಡಿಸಲಾಯಿತು.
ಜ.14ರಂದು ನಾಟಕ ಸ್ಪರ್ಧೆಯ ಉದ್ಘಾಟನೆ ನಡೆಯಲಿದ್ದು ಬಳಿಕ ಪಂಚಶ್ರೀ ಕಲಾ ತಂಡ ಬಂಟ್ವಾಳ ಇವರಿಂದ ದೇವೆರ್ ತೂಪೆರ್ ನಾಟಕ,ಜ.15ರಂದು ಧರಿತ್ರಿ ಕಲಾವಿದೆರ್ ಕುಡ್ಲ ಇವರಿಂದ ನನ ಏರುಲ್ಲೆರ್ ನಾಟಕ,ಜ.16 ರಂದು ನಮ್ಮ ಕಲಾವಿದೆರ್ ನೆಲ್ಯಾಡಿ ಇವರಿಂದ ಪನ್ಪಿನಕುಲು ಪನ್ಪೆರ್ ನಾಟಕ,ಜ.17 ರಂದು ತೆಲಿಕೆದ ತೆನಾಲಿ ಕಾರ್ಲ ಇವರಿಂದ ಮದಿರೆಂಗಿ ನಾಟಕ,ಜ.18ರಂದು ಶ್ರೀ ಶಾರದ ಕುಸಲ್ದ ಕಲಾವಿದೆರ್ ರಾಯಿ ಕೊಯಿಲ ಇವರಿಂದ ಉಲಾಯಿ ಲೆಪ್ಪುಗ ನಾಟಕ, ಜ.19ರಂದು ಚೈತನ್ಯಾ ಕಲಾವಿದೆರ್ ಬಲೂರು ಇವರಿಂದ ಸ್ಟಾರ್ ನಾಟಕ,ಜ.20 ರಂದು ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ ಮದಿಮೆ ಒಂಜಿ ಆಂಡ್‌ಗೆತ್ತಾ ನಾಟಕ,ಜ.21ರಂದು ಸಮಾರೋಪ ಸಮಾರಂಭ ನಡೆಯಲಿದ್ದು ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.