ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಒಮಾನ್ ಇದರ ವತಿಯಿಂದ “ಹುಬ್ಬು‘ರಸೂಲ್(ಸ.ಅ)” ಕಾರ್ಯಕ್ರಮವು ದಿನಾಂಕ 10-12-2016 ರಂದು ಅಲ್–ಮಾಸ ಹಾಲ್‘ ಮಸ್ಕತ್ ರೂವಿಯಲ್ಲಿ ನಡೆಯಿತು.
ಮಕ್ಕಳಿಗಾಗಿ ಕಿರಾಅತ್, ನಾತ್, ಆಟೋಟ,ಪ್ರತಿಭಾ ಸ್ಪರ್ದೆಯನ್ನಿಟ್ಟು ಮಕ್ಕಳ ಮನಸ್ಸಿನೊಂದಿಗೆ ಪೋಷಕರ ಮನವನ್ನು ಗೆಲ್ಲುವಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಯಶಸ್ವಿಯಾಗಿತ್ತು.ಈ ಕಾರ್ಯಕ್ರಮವನ್ನು ಅಶ್ರಫ್ ಬಾವ,ನೂರ್ ಮುಹಮ್ಮದ್ ಪಡುಬಿದ್ರಿ ಮತ್ತು ಯೂಸುಫ್ ಹೈದರ್ ಮಕ್ಕ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪರ್ವೇಝ್ ಕೃಷ್ಣಾಪುರ ಮತ್ತು ಅನ್ಸಾರ್ ಕಾಟಿಪಳ್ಳ ಇವರಿಂದ ಪ್ರವಾದಿ ಚರ್ಯೆಯ ನೀತಿಯ ಹಾಡುಗಳು ಪ್ರೇಕ್ಷಕರನ್ನು ಹುರಿದುಂಬಿಸುವಲ್ಲಿ ಸಫಲವಾಯಿತು.
ಬಹುಮಾನ್ಯರಾದ ಅಸ್ಸೈಯ್ಯದ್ ಹಂಝತ್ ರಿಫಾಯಿ ತಙ್ಞಳ್’ರವರ ದುಆದೊಂದಿಗೆ ಕಾರ್ಯಕ್ರಮವು ಮುಂದುವರಿದು ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದ ಅಬ್ಬಾಸ್ ಉಚ್ಚಿಲರವರು ಸ್ವಾಗತಿಸುತ್ತಾ ಪ್ರವಾದಿ (ಸ್ವ.ಅ)ರು ತನ್ನ ಅನುಯಾಯಿಗಳ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದ ರೀತೀಯನ್ನೊಮ್ಮೆ ನಾವು ಮೆಲುಕುಹಾಕಬೇಕೆನ್ನುತ್ತಾ, ಏಕದೇವನಾದ ಅಲ್ಲಾಹುವಿನ ಹೊರತು ಅನ್ಯ ಆರಾಧಕನಿಲ್ಲ,ನಾನು ಅವನ ಮೇಲೆಯೇ ಭರವರೆಯಿರಿಸಿದ್ದೇನೆ ಮತ್ತು ಅವನು ಮಹೋನ್ನತ ದಿವ್ಯಾಸನದ ಒಡೆಯನಾಗಿದ್ದಾನೆ ಎಂಬ ಸೂರಃ ತೌಬ (128-129) ಅಧ್ಯಾಯವನ್ನು ಮೆಲುಕು ಹಾಕಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ “ಮೌಲಾನ ಖಲೀಲಿ ಇಬ್ರಾಹಿಂ ಹುದವಿ ಮತ್ತು ಮೌಲಾನ ಖಾರಿ ಮುಹಮ್ಮದ್ ಶರ್ಫುಲ್ಲಾಹ್ ರಝ್ವಿ”ಯವರು ಪ್ರವಾದಿ ಸ.ಅ ರವರು ಬೆಳೆದು ಬಂದ ರೀತಿ ಮತ್ತು ಅವರ ನಡೆ ನುಡಿ ಆದೇಶಗಳನ್ನು ದಿನಂಪ್ರತಿ ತಮ್ಮ ಬಾಳಿನಲ್ಲಿ ಅಳವಡಿಸಲೇಬೇಕೆಂದು ಕರೆ ನೀಡಿದರು. ಈ ಸಂಧರ್ಬದಲ್ಲಿ ನಡೆದ ಮೌಲೂದ್ ಪಾರಾಯಣಕ್ಕೆ ಉಮರ್ ಸಖಾಫಿ ಮಿತ್ತೂರು ನೇತೃತ್ವ ವಹಿಸಿದ್ದರು.
ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಬೆಳೆದು ಬಂದ ರೀತಿ ಮತ್ತು ಮುಂದಿನ ಯೋಜನೆಗಳನ್ನು ವೀಡಿಯೋ ಪ್ರಕ್ಷೇಪಕ (ಪ್ರೊಜೆಕ್ಟರ್) ಮೂಲಕ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹಮಾನ್ ಮತ್ತು ಅಬ್ದುಲ್ ಶುಕೂರ್’ರವರು ನಡೆಸಿಕೊಟ್ಟರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಿ.ಕೆ.ಎಸ್.ಸಿ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹಮಾನ್,ಬಹುಮಾನ್ಯರಾದ ಹಂಝತ್ ರಿಫಾಯಿ ತಙ್ಞಳ್,ಡಿ.ಕೆ.ಎಸ್.ಸಿ ಕನ್ವೀನರ್ ಮುಸ್ತಫ ಸಖಾಫಿ, ಡಿ.ಕೆ.ಎಸ್.ಸಿ ಒಮಾನ್’ನ ಸ್ಥಾಪಕಾಧ್ಯಕ್ಷರಾದ ಉಮರ್ ಸಖಾಫಿ ಮಿತ್ತೂರ್ ಉಪಸ್ಥಿತರಿದ್ದರು.
ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಪ್ರವಾದಿ ಚರ್ಯೆಯ ಪ್ರಶ್ನಾವಳಿ ಸ್ಪರ್ದೆ (ಕ್ವಿಝ್) ಕಾರ್ಯಕ್ರಮವನ್ನು ರಫೀಕ್ ಪಡುಬಿದ್ರಿಯವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು . ನೆರೆದ ಸಭೆಗೆ ನೀಡಿದ ಪ್ರಶ್ನೆಗುತ್ತರವಾಗಿ ಸಯ್ಯದ್ ಮೊಹಿದಿನ್ ಸಾಹೇಬ್ ಸಾಸ್ತಾನ್ ಆಕರ್ಷಕ ಬಹುಮಾನವನ್ನು ನೀಡಿದರು. ಮಕ್ಕಳ ಕಾರ್ಯಕ್ರಮದ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಮತ್ತು ಪಾಲ್ಗೊಂಡ ಎಲ್ಲಾ ಮಕ್ಕಳಿಗೂ ಆಕರ್ಷಕ ಬಹುಮಾನ್ನು ನೀಡಲಾಯಿತು.ಈ ಸಮಯದಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್’ನ 2017ರ ಕ್ಯಾಲೆಂಡರನ್ನು ಅಬ್ದುಲ್ ಹಮೀದ್ ಪಡೀಲ್ ಉದ್ಘಾಟಿಸಿದರು.
ಯೂಸುಫ್ ಹೈದರ್ ಮುಕ್ಕ ಧನ್ಯವಾದಗೈದರೆ, ನಿಯಾಝ್ ಮುಹಮ್ಮದ್ ಓ.ಟಿ.ಇ, ಫರ್ವೇಝ್ ಕೃಷ್ಣಾಪುರ ಮತ್ತು ಬಳಗ ಸ್ವಯಂಸೇವಕ ವ್ಯವಸ್ಥೆಯ ಉಸ್ತುವಾರಿ ವಹಿಸಿದರು. ಊಟೋಪಚಾರದ ನೇತೃತ್ವವನ್ನು ಮೊಹಿದಿನ್ ಪಡುಬಿದ್ರಿಯವರು ನೆರವೇರಿಸಿದರೆ. ಅನ್ಸಾರ್ ಕಾಟಿಪಳ್ಳ ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು