ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.
ಬಂಟ್ವಾಳ: ಶಿಶುಮಂದಿರದಿಂದ ಪದವಿ ತರಗತಿಯವರೆಗೆ ಅಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು. ಎರಡು ಗಂಟೆಗಳ ಕಾರ್ಯಕ್ರಮ. ನೋಡಲು ಸುಮಾರು ಇನ್ನೂರು ಆಹ್ವಾನಿತ ಗಣ್ಯರ ಜೊತೆಗೆ ಸಾವಿರಾರು ಪ್ರೇಕ್ಷಕರು. ಬೃಹತ್ ಎಲ್ ಸಿಡಿ ಪರದೆಗಳು. ಮೈನವಿರೇಳಿಸುವ ಸಾಹಸ ಪ್ರದರ್ಶನ, ದೇಶಭಕ್ತಿ ಮೆರೆಸುವ ಕಾರ್ಯಕ್ರಮ.
ಇದು ಭಾನುವಾರ ರಾತ್ರಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿಶಾಲವಾದ ಮೈದಾನದಲ್ಲಿ ನಡೆದ ಕಾರ್ಯಕ್ರಮದ ಒಂದು ಝಲಕ್.
ಡಾ| ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಭೌದ್ಧಿಕ್ ಪ್ರಮುಖ್ ಮುಕುಂದರ್ ಮಾತಾನಾಡಿ ದೇಶದ ಶಿಕ್ಷಣ ಸಂಸ್ಥೆಗಳಿಗೆ ಶ್ರೀರಾಮ ವಿದ್ಯಾಕೇಂದ್ರ ಮಾದರಿ ಆಗಬೇಕು ಎಂದರು.
ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯದ ಮಾರ್ಗದರ್ಶಕ ಆರ್. ಸಿ. ಸಿನ್ಹಾ, ಆರ್ ಬಿ ಐ ವಿದೇಶಿ ವಿನಿಮಯದ ಮುಖ್ಯಸ್ಥ ಎ.ಕೆ ಪಾಂಡೆ, ಮುಂಬಯಿ ದಕ್ಷಿಣ ಕೇಂದ್ರ ಸಂಸದ ರಾಹುಲ ಶೇವಾಲೆ, ಎನ್,ಆರ್,ಐ ಪೋರಂ ಸೌದಿ ಅರೇಬಿಯ ಸ್ಥಾಪಕ ಅಧ್ಯಕ್ಷ ಬಿ,ಕೆ ಶೆಟ್ಟಿ, ಶಾಸಕಿ ಶಶಿಕಲಾ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ವಿವಿಧ ಕ್ಷೇತ್ರಗಳ ಗಣ್ಯರಾದ ಸುಧೀರ್ ಶೆಟ್ಟಿ ಮುಂಬೈ, ಶಿವಯೋಗಿ ಶಿರೂರು, ಮಂಜುನಾಥ ಹರ್ಲಾಪುರ, ಅಜಿತ್ ರೈ ಪಾದೆ, ಡಾ.ಎನ್.ಕೆ.ಬಿಲ್ಲವ, ಡಾ.ಆನಂದ್ ಪಾಂಡುರಂಗಿ, ವಿಶ್ವನಾಥ ರಾವ್, ಸುದರ್ಶನ್ ಗುಪ್ತಾ, ರಾಜೇಶ್ ನಾಯ್ಕ್, ಕೃಷ್ಣ ಜೆ.ಪಾಲೇಮಾರರ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತಮಾಧವ, ಅಧ್ಯಕ್ಷ ನಾರಾಯಣ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು. ರಾಧಾಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿದರು.
ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯ ಹಾಗೂ ಪಾಕ್ ಪ್ರೇರಿತ ಭಯೋತ್ಪಾದಕರ ದುಷ್ಕೃತ್ಯದ ಅಣಕು ಪ್ರದರ್ಶನ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 13 ರಂದು ಗೋವಾದಲ್ಲಿ ಮಾಡಿದ ಭಾಷನದ ಪ್ರತಿರೂಪ , 500 ಹಾಗೂ 1000 ನೋಟುಗಳ ನಿಷೇಧದ ದಿಟ್ಟ ಹೆಜ್ಜೆಯನ್ನು ಸಮರ್ಥಿಸುವ ಚಿತ್ರಣ ಪರಿಣಾಮ ಕಾರಿಯಾಗಿ ಮೂಡಿಬಂತು.
ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಸಾಮೂಹಿಕ ಘೋಷ್ ಪ್ರದರ್ಶನ ದೊಂದಿಗೆ ಆರಂಭಗೊಂಡ ಕಾಲೇಜು ವಿದ್ಯಾರ್ಥಿಗಳ ಕೋವಿ ಸಹಿತ ಸಮತಾ ಪ್ರದರ್ಶನ ಶಿಸ್ತಿನ ಸೈನಿಕರನ್ನು ನೆನಪಿಸಿತು.
ಶಿಶು ಮಂದಿರಗಳ ಪುಟಾಣಿಗಳ ನೃತ್ಯ, ಪ್ರಾಥಮಿಕ ಮಕ್ಕಳ ಜಡೆಕೋಲಾಟ , ಭಾರತೀಯ ನಿಶ್ಯಸ್ತ್ರ ಯುದ್ಧಕಲೆ ಪ್ರದರ್ಶನಗೊಂಡಿತು.
ಎಲ್ಲ ಭೇದ ಮರೆತು ಬನ್ನಿರಿ ನಾವು ಸಮಾನ ಎಂಬ ಹಾಡಿಗೆ ಸಾಮೂಹಿಕ ದೀಪಾರತಿ ಮಾಡುವ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಇವರ 125 ನೇ ಜನ್ಮ ದಿನಾಚರಣೆಯ ಸ್ತಬ್ದ ಚಿತ್ರ ಸಮಾನತೆಯ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು. ಯೋಗ ಗುಚ್ಛಗಳ ರಚನೆ ವಿವಿಧ ಯೋಗಾಸನಗಳ ಪ್ರದರ್ಶನವಾಗಿತ್ತು.
ಪ್ರಾಥಮಿಕ ಶಾಲೆಯ 500 ಕ್ಕೂ ಮಿಕ್ಕ ವಿದ್ಯಾರ್ಥಿಗಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಹಣತೆ, ಓಂಕಾರ , ತಾವರೆ ರಚನೆಗಳ ಚಿತ್ತಾರ ಮೂಡಿಸಿತು. ಗುಜರಾತ್ ಬಾಷೆಯ ಹಾಡಿಗೆ ಕುಣಿತ ಭಜನೆ, ಬಾಟಲಿಗಳ ಮೇಲೇ ಜೋಡಿಸಿದ ತಿರುಗುವ ಮಲ್ಲಕಂಬಗಳಲ್ಲಿ ಯೋಗಾಸನ ಪ್ರದರ್ಶನ ಅದ್ಭುತವಾಗಿತ್ತು.ಕಾಲೇಜು ವಿದ್ಯಾರ್ಥಿನಿಯರ ಯಕ್ಷಗಾನ ಶೈಲಿಯ ನೃತ್ಯ, ಸೈಕಲ್, ಮೋಟಾರು ಸೈಕಲ್ಲುಗಳಲ್ಲಿ ಮಾಡಿದ ಕಸರತ್ತುಗಳು ರೋಮಾಂಚನಕಾರಿಯಾಗಿ ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಕಾಲೇಜು ವಿದ್ಯಾರ್ಥಿಗಳಿಂದ ಕೇರಳದ ಚೆಂಡೆ ವಾದನ, ಬೆಂಕಿ ಸಾಹಸ, ಸ್ಕೇಟಿಂಗ್ ಪ್ರದರ್ಶನ , ಕೂಪಿಕಾ ಸಮತೋಲನ ಎಲ್ಲರ ಗಮನ ಸೆಳೆಯಿತು.
ಕೋವಿ ಸಮತಾ ಪ್ರದರ್ಶನ, ಶಿಶುಮಂದಿರದ ಪುಟಾಣಿಗಳಿಂದ ನೃತ್ಯ, ಘೋಷ್ ಪ್ರದರ್ಶನ, ಜಡೆಕೋಲಾಟ ನೃತ್ಯಗಳು, ಡಾ.ಬಿ.ಆರ್.ಅಂಬೇಡ್ಕರ್ 125ನೇ ಜನ್ಮದಿನಾಚರಣಾ ವರ್ಷ ಆಚರಣೆ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಲು ದೀಪಗಳ ಸಂಯೋಜನೆ, ಭಾರತೀಯ ನಿಶ್ಯಸ್ತ್ರ ಯುದ್ಧ ಕಲೆ ನಿಯುದ್ಧ, ಯೋಗಾಸನ, 500ಕ್ಕೂ ಅಧಿಕ ಪ್ರಾಥಮಿಕ ವಿದ್ಯಾರ್ಥಿಗಳಿಂದ ಓಂಕಾರ, ತಾವರೆ ರಚನೆಗಳೊಂದಿಗೆ ವಿಶೇಷ ಪ್ರದರ್ಶನ, ವಿದ್ಯಾರ್ಥಿಗಳ ಮಲ್ಲಕಂಬ ಚಕ್ರ ಸಮತೋಲನ, ಬೆಂಕಿ ಸಾಹಸ, ಸ್ಕೇಟಿಂಗ್ ಪ್ರದರ್ಶನ, ಕೂಪಿಕಾ ಸಮತೋಲನದಂಥ ಸಾಹಸ ಪ್ರದರ್ಶನಗಳು ಮೈನವಿರೇಳಿಸುವಂತೆ ಮಾಡಿದವು. ಶ್ರೀರಾಮ ವಿದ್ಯಾಕೇಂದ್ರದ ವಿಶಿಷ್ಟತೆ ಇರುವುದು ಪ್ರತಿಯೊಂದು ವಿದ್ಯಾರ್ಥಿಗಳನ್ನು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಲ್ಲಿ. ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಸಂಸ್ಥೆಯ ಪುಟಾಣಿಗಳಿಂದ ಪದವಿ ವಿದ್ಯಾರ್ಥಿಗಳವರೆಗೆ ಎಲ್ಲರೂ ಪಾಲ್ಗೊಂಡಿದ್ದರು.