ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ ಐಓ) ಕರ್ನಾಟಕ ಘಟಕವು ಪ್ರವಾದಿ ಮುಹಮ್ಮದ್(ಸ)ರವರ ಜೀವನಾದರ್ಶಗಳ ಮೂಲಕ ರಾಜ್ಯಾದ್ಯಂತ ‘ಪ್ರವಾದಿ ಮುಹಮ್ಮದ್: ಮಾನವಕುಲದ ವಿಮೋಚಕ’ ಎಂಬ ಧ್ಯೇಯದೊಂದಿಗೆ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ನಿಟ್ಟಿನಲ್ಲಿ ಎಸ್ ಐ ಓ ಬಂಟ್ವಾಳ ತಾಲೂಕು ವತಿಯಿಂದ ಬಂಟ್ವಾಳ ತಾಲೂಕಿನ ಪದವಿಪೂರ್ವ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಸಮಾಜದಲ್ಲಿನ ಎಲ್ಲ ಮಾನವರ ಪ್ರಸಕ್ತ ಜ್ವಲಂತ ಸಮಸ್ಯೆಗಳಿಗೆ ಪ್ರವಾದಿ ಮುಹಮ್ಮದ್ (ಸ)ರವರು ಜಗತ್ತಿಗೆ ಯಾವ ರೀತಿಯಾದ ಪರಿಹಾರಗಳಿವೆ ಮತ್ತು ಅದು ಎಷ್ಟು ಪರಿಣಾಮಕಾರಿಯಾಗಿದೆ ಎಂಬ ವಿಚಾರವಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ, ಸಮಾನತೆ, ಸಹಿಷ್ಣುತೆ, ಚಾರಿತ್ರ್ಯ ಮುಂತಾದ ಮೌಲ್ಯಗಳನ್ನು ಬೆಳೆಸಲು “ ಮಾನವ ಕುಲದ ವಿಮೋಚಕರಾಗಿ ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಈ ಸ್ಪರ್ಧೆಯು ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಬರೆಯಬಹುದು. ಪ್ರಥಮ ಬಹುಮಾನ 2000 ರೂ., ದ್ವಿತೀಯ 1000 ರೂ.ನಗದು ಮತ್ತು ಪ್ರಮಾಣಪತ್ರ ಮತ್ತು ಸಮಾಧಾನಕರ ಬಹುಮಾನವಿದೆ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ವಿದ್ಯಾರ್ಥಿಗಳು ಎ4 ಶೀಟ್ ನಲ್ಲಿ ಮೂರು ಪುಟ ಮೀರದಂತೆ ಪ್ರಬಂಧ ಬರೆದು, ತಮ್ಮ ಪೂರ್ಣ ಹೆಸರು, ಮನೆಯ ವಿಳಾಸ, ಕಾಲೇಜಿನ ಪ್ರಾಂಶುಪಾಲರ ಸಹಿ ಮತ್ತು ದೃಢೀಕರಣ ಪತ್ರದೊಂದಿಗೆ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಬರೆದು, ಡಿಸೆಂಬರ್ 26, 2016ರೊಳಗೆ ಸಂಚಾಲಕರು, ಎಸ್ ಐ ಓ, ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು-575001 ಈ ವಿಳಾಸಕ್ಕೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಳಿಗಾಗಿ 9844963059, 8050101458, ಅಥವಾ ಈ ಮೇಲ್ ವಿಳಾಸ prsiodkdist@gmail.com ಅನ್ನು ಸಂಪರ್ಕಿಸಬಹುದು ಎಂದು ಎಸ್ ಐ ಓ ಬಂಟ್ವಾಳ ತಾಲೂಕು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.