ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದಲ್ಲಿ ಪಾನಮತ್ತ ಹಾಗೂ ಗಾಂಜಾವ್ಯಸನಿಯೋರ್ವ ಮಧ್ಯವಯಸ್ಕ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ.
ಬುಧವಾರ ಮಧ್ಯರಾತ್ರಿ ಸ್ಥಳೀಯ ನಿವಾಸಿ ಸಿದ್ದಿಕ್ (30) ತನ್ನದೇ ಊರಿನ 52 ವರ್ಷದ ಒಂಟಿಯಾಗಿ ವಾಸಿಸುವ ಮಹಿಳೆಯೋರ್ವಳ ಮನೆಗೆ ಆಗಮಿಸಿ ಬಾಗಿಲು ಬಡಿದ. ಶಬ್ದ ಕೇಳಿ ಬಾಗಿಲು ತೆರೆದಾಗ ಬಲಾತ್ಕಾರವಾಗಿ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಮಹಿಳೆ ಬೊಬ್ಬೆ ಹಾಕಿದಾಗ ಆರೋಪಿ ಓಡಿದ್ದಾನೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಹಿಳೆ ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಆರೋಪಿಯು ಮದ್ಯಪಾನವಷ್ಟೇ ಅಲ್ಲ, ಗಾಂಜಾ ವ್ಯಸನಿಯೂ ಆಗಿದ್ದನೆಂದು ಹೇಳಲಾಗಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)