ಬಂಟ್ವಾಳ: ಕಳೆದ ಮೂರು ದಿನಗಳಿಂದ ಬಿ.ಸಿ.ರೋಡ್ ನಗರಕ್ಕೆ ನೀರು ಪೂರೈಕೆಯಾಗದಿರುವುದರಿಂದ ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ.
ಕಳೆದ ಭಾನುವಾರದಿಂದ ಗೂಡಿನಬಳಿ ಇರುವ ಪುರಸಭೆಯ ಮುಖ್ಯ ಕೊಳವೆಯಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.
ನೀರಿನ ಪೈಪ್ ಒಡೆದು ಹೋಗಿರುವ ಹಿನ್ನಲೆಯಲ್ಲಿ ಬಿ.ಸಿ.ರೋಡಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆಯೆನ್ನಲಾಗಿದೆ. ಮಂಗಳವಾರ ಈ ಪೈಪನ್ನು ದುರಸ್ತಿ ಮಾಡಲಾಗಿತ್ತಾದರೂ ಇಡೀ ಹೊತ್ತು ವಿದ್ಯುತ್ಕಡಿತಗೊಂಡಿದರಿಂದ ನೀರು ಶೇಖರಣೆಯಾಗಿರಲಿಲ್ಲ. ಆದರೆ ಸಂಜೆಯ ವೇಳೆಗೆ ದುರಸ್ತಿ ಮಾಡಲಾದ ಪೈಪ್ ಮತ್ತೆ ಒಡೆದುದರಿಂದ ಬುಧವಾರವೂ ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ.ಕೆಲವರು ಅಕ್ಕಪಕ್ಕದ ಬಾವಿಯ ಮೊರೆ ಹೋದರೆ,ಇನ್ನು ಕೆಲವರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)