ಬಂಟ್ವಾಳ: ಸನಾತನ ಸಂಸ್ಖೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೊಬ್ಬ ಹಿಂದುವೂ ಸಂಸ್ಕೃತಿ ಉಳಿಸುವ ಕಾರ್ಯ ನಡೆಸಬೇಕು ಎಂದು ಶ್ರೀ ಕ್ಷೇತ್ರ ಪೊಳಲಿಯ ವಿವೇಕಾಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಹಿಂದೂ ಜಾಗರಣ ವೇದಿಕೆಯ ವತಿಯಿಂದ ಡಿ.6 ರಂದು ಅಯೋಧ್ಯೆ ಶ್ರೀ ರಾಮನ ಜನ್ಮ ಸ್ಥಾನದ ಬಗ್ಗೆ ನಡೆದ ಮುಕ್ತಿ ಅಂದೋಲನದ ವಿಜಯ ದಿನದ ಅಂಗವಾಗಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮದ ಸಭಾ ಕಾರ್‍ಯಕ್ರಮದಲ್ಲಿ ಅರ್ಶೀವಚನ ನೀಡಿದರು.
ದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ದಿಕ್ಸೂಚಿ ಭಾಷಣದ ಮೂಲಕ ಬಹು ಸಂಖ್ಯಾತ ಹಿಂದೂ ಬಹು ದೊಡ್ಡ ಕನಸಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಡಳಿತ ಪಕ್ಷ ಸಂವಿಧಾದದಲ್ಲಿ ತಿದ್ದು ಪಡಿ ತಂದು ಕನಸನ್ನು ನನಸು ಮಾಡಬೇಕು ಎಂದು ಹೇಳಿದರು. ಭಯೋತ್ಪಾದನೆ ಮತಾಂತರ ಮತ್ತು ಸಮಾಜ ಒಡೆಯುವ ಕೆಲಸವನ್ನು ಎಂದೂ ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.
ಬಂಟ್ವಾಳ ತಾಲೂಕು ಹಿಂದು ಜಾಗರಣಾ ಅಧ್ಯಕ್ಷ ಚಂದ್ರ ಕಲಾಯಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ , ಜಿಲ್ಲಾ ಸಂಘಟನಾ ಕಾರ್‍ಯದರ್ಶಿ ಬಾಲಕೃಷ್ಣ ಕಲಾಯಿ ಉಪಸಿತರಿದ್ದರು. ಬಾಲಕೃಷ್ಣ ಕಾಮಾಜೆ ಸ್ವಾಗತಿಸಿ, ಕಿರಣ್ ಮೂರ್ಜೆ ಧನ್ಯವಾದ ನೀಡಿದರು , ರಮೇಶ್ ಕುಮಾರ್ ವಗ್ಗ ಕಾರ್‍ಯಕ್ರಮ ನಿರೂಪಿಸಿದರು.