ಬಂಟ್ವಾಳ: ಇಲ್ಲಿನ ಎಸ್ ವಿಎಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘ ಆಶ್ರಯದಲ್ಲಿ ಭಾರತದ ಗಣಿತಜ್ಞರು ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು.
ಈ ಸಂದರ್ಭ ಉಪನ್ಯಾಸ ನೀಡಿದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕ ಗಣೇಶ್ ನಾಯಕ್, ವಿಜ್ಞಾನ ಹಾಗೂ ಗಣಿತ ಲೋಕಕ್ಕೆ ಭಾರತೀಯರ ಕೊಡುಗೆ ಅಪರಿಮಿತವಾದದ್ದು. ವಿದ್ಯಾರ್ಥಿಗಳು ಭಾರತವು ವಿಶ್ವಕ್ಕೆ ಕೊಟ್ಟ ಕೊಡುಗೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಜ್ಞಾನ ಸಂಘದ ಅಧ್ಯಕ್ಷೆ ,ಗಣಿತಶಾಸ್ತ್ರ ಉಪನ್ಯಾಸಕಿ ಕವಿತಾ ಯಾದವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ವಿದ್ಯಾರ್ಥಿ ವಿಲಾಸ್ ಸ್ವಾಗತಿಸಿ, ಜೊತೆಕಾರ್ಯದರ್ಶಿ ಸುಶ್ಮಿತಾ ಎಮ್. ಕುಲಾಲ್ ವಂದಿಸಿದರು.
ಅಪರ್ಣಾ ಎಸ್. ಉಚ್ಚಿಲ್ ಹಾಗೂ ದಿವ್ಯಶ್ರೀ ಪಿ. ಪ್ರಾರ್ಥಿಸಿದರು. ಪ್ರಜ್ವಲ್ ಜೋಯ್ ನೊರೊನ್ಹಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ, ಉಪನ್ಯಾಸಕರಾದ ಸ್ಮಿತಾ, ನಮಿತಾ, ತೇಜಸ್ವಿ, ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.