ಕಲ್ಲಡ್ಕ: ಅಮ್ಟೂರು ಗ್ರಾಮದ ಶಿವಾಜಿ ಫ್ರೆಂಡ್ಸ್ ಉತ್ತಮ ಸಾಮಾಜಿಕ ಕಾರ್ಯ ನಡೆಸುತ್ತಿರುವುದು ಹೆಮ್ಮೆಯ ಕೆಲಸ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅಮ್ಟೂರು ಶಿವಾಜಿ ಫ್ರೆಂಡ್ಸ್ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸಮಾಜಸೇವೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಹೇಳಿದರು.
ಕಾರ್‍ಯಕ್ರಮದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾದ ಅಧ್ಯಕ್ಷ ದಿನೇಶ್‌ಅಮ್ಟೂರು, ಕುದ್ರೋಳಿ ಗಣೇಶ್, ಹಾಗೂ ಪಲ್ಲವಿ ಪ್ರಭು ಅವರಿಗೆ ಸನ್ಮಾನ ಮಾಡಲಾಯಿತು. ದ.ಕ.ಜಿಲ್ಲಾ ಬಿ.ಜೆ.ಪಿ ವಕ್ತಾರ ಜಿತೇಂದ್ರ ಎಸ್. ಕೊಟ್ಟಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಜರಂಗ ದಳದ ಪ್ರಾಂತ ಸಂಚಾಲಕ ಶರಣ ಪಂಪ್‌ವೆಲ್, ಹಿಂದೂಜಾಗರಣ ವೇದಿಕೆಯ ಪ್ರಾಂತ ಕಾರ್‍ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಉದ್ಯಮಿ ಅನಿಲ್ ದಾಸ್, ಜಿಲ್ಲಾ ಬಿ.ಜೆ.ಪಿ ಕಾರ್‍ಯಕಾರಿಣಿ ಸದಸ್ಯ ಅಶೋಕ್‌ರೈ, ಅರುಣ್ ಪುತ್ತಿಲ, ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಮೈಮೇಲೆ ಬೆಂಕಿ ಬಿದ್ದು ಮೈಸುಟ್ಟುಕೊಂಡಿರುವ ಬಡಕುಟುಂಬದ ಮೀನಾಕ್ಷಿ ಹಾಗೂ ಗೀತಾ ಇವರಿಗೆ ಶಿಕ್ಷಣಕ್ಕೆ ಧನಸಹಾಯವನ್ನು ಅತಿಥಿಗಳ ಸಮ್ಮುಖದಲ್ಲಿ ನೀಡಲಾಯಿತು. ದಿನೇಶ ಅಮ್ಟೂರು ಸ್ವಾಗತಿಸಿ, ನಂದನ್ ರೈ ವಂದಿಸಿದರು. ಕಾರ್‍ಯಕ್ರಮವನ್ನು ಕುಶಾಲಪ್ಪಅಮ್ಟೂರು, ರಾಜೇಶ್ ಕೊಟ್ಟಾರಿ ನಿರ್ವಹಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)