ಬಂಟ್ವಾಳ: ಸತ್ಯ ಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಇದರ ವತಿಯಿಂದ ಬೊಳ್ಳುಕಲ್ಲುವಿನಲ್ಲಿ ನಡೆದ 10 ತಂಡಗಳ ಅಹ್ವಾನಿತ ತಂಡಗಳ ಪ್ರಿಮೀಯರ್ ವಾಲಿಬಾಲ್ ಪಂದ್ಯಾಟವನ್ನು ಯುವ ವೇದಿಕೆ ಪೆರಾಜೆ ಸಂಚಾಲಕ ರಾಜಾರಾಮ್ ಕಡೂರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪ್ರಗತಿ ಕೃಷಿಕ ಅಪ್ರಾಯ ಪೈ ಬುಡೋಳಿ ಅವರು ವಹಿಸಿದ್ದರು. ವಾಲಿಬಾಲ್ ಅಂಕಣವನ್ನು ಮಾಣಿ ಕ.ಪ್ರೌ.ಶಾಲೆಯ ದೈಹಿಕ ಶಿಕ್ಷಕ ಗಂಗಾದರ ರೈ ಸೇರಾ ಉದ್ಘಾಟಿಸಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಮಂಜುಳಾ ಕುಶಲ ಮಂಜೋಟ್ಟಿ, ಪೆರಾಜೆ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ರೈ , ಭಾರತೀಯ ಜನತಾ ಪಾರ್ಟಿಯ ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ವಿನೀತ್ ಶೆಟ್ಟಿ, ಸತ್ಯ ಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಇದರ ಅಧ್ಯಕ್ಷ ಅಣ್ಣಿ ಪೂಜಾರಿ, ಪರ್ತಕರ್ತ ಕಿಶೋರ್ ಪೆರಾಜೆ ಉಪಸಿತರಿದ್ದರು. ಜನಾರ್ಧನ ಸ್ವಾಗತಿಸಿ, ಸುಮಂತ್ ವಂದಿಸಿದರು. ಯತಿರಾಜ್ ಪೆರಾಜೆ ಕಾರ್‍ಯಕ್ರಮ ನಿರೂಪಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…