ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಸಂಘ ವತಿಯಿಂದ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.
ಮೈತ್ರೇಯಿ ಗುರುಕುಲದ ಉನ್ನತ ಶಿಕ್ಷಣ ಪ್ರಾಚಾರ್ಯರಾದ ಉಮೇಶ ಹೆಗ್ಡೆ ಸಂಸ್ಕೃತವು ಅನಾದಿಕಾಲದಿಂದ ಈವರೆಗೆ ವ್ಯಾವಹಾರಿಕ, ಗ್ರಾಂಥಿಕ ಭಾಷೆಯಾಗಿ ಬೆಳೆದು ಬಂದ ಕಾರಣ ಅದು ಒಂದು ಮೃತ ಭಾಷೆಯಲ್ಲ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಎಲ್ಲರೂ ಸಾಕ್ಷರರಾಗಿ ವಿನಯವಂತರಾಗಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ವಾಸುದೇವ ಕಾರಂತ ಸ್ವಾಗತಿಸಿದರು. ಶ್ವೇತಾ ಧನ್ಯವಾದಗೈದರು. ಶರಣ್ಯ ಕಾರ್‍ಯಕ್ರಮ ನಿರೂಪಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)