ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 5ರಂದು ವರ್ಷಾವಧಿ ನಡೆಯುವ ಪೂರ್ವಾಶಿಷ್ಟ ಸಂಪ್ರದಾಯ ಷಷ್ಠಿ ಉತ್ಸವದ ಕಾರ್ಯಕ್ರಮಗಳು ಹೀಗಿವೆ.
ಡಿ. 4ರಂದು ಪಂಚಮಿ ಬೆಳಿಗ್ಗೆ 10 ಗಂಟೆಗೆ ದೇವತಾ ಪ್ರಾರ್ಥನೆ, ಬಳಿಕ ಸ್ವಸ್ತಿ ಪುಣ್ಯಾಹ ವಾಚನ, 12 ತೆಂಗಿನ ಕಾಯಿ ಗಣಹೋಮ, , 11. 30ಕ್ಕೆ ನಾಗತಂಬಿಲ, 12 ಗಂಟಗೆ ಮಹಾಪೂಜೆ, ಸಂಜೆ 7 ಗಂಟೆಗೆ ಸಾಮೂಹಿಕ ಆಶ್ಲೇಷ ಪೂಜೆ, ರಾತ್ರಿ 8 ಗಂಟೆಗೆ ಪಂಚಮಿ ಪೂಜೆ ಪ್ರಸಾದ ವಿತರಣೆ ನಡೆಯುವುದು.
ಡಿ. 5ರಂದು ಷಷ್ಠಿ ಅಂಗವಾಗಿ ಬೆಳಿಗ್ಗೆ 10ಗಂಟೆಗೆ ಸೀಯಾಳ ಅಭಿಷೇಕ, 11 ಗಂಟೆಗೆ ಪವಮಾನ ಅಭಿಷೇಕ, 11.30 ಕ್ಕೆ ನಾಗತಂಬಿಲ, 12 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯುವುದು.
ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.5ರಂದು ವಾರ್ಷಿಕ ಷಷ್ಠಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಡಿ.4ರಂದು ರಾತ್ರಿ 8ರಂದು ವಿವಿಧ ಭಜನಾ ಮಂಡಳಿಗಳ ಭಜನಾ ಸೇವೆ ಹಮ್ಮಿಕೊಂಡಿದೆ. ಡಿ. 5ರಂದು ಬೆಳಿಗ್ಗೆ ಗಣಪತಿ ಹವನ, ಬಿಂಬ ಶುದ್ಧಿ, ಕಲಶ ಪೂಜೆ, ಬೆಳಿಗ್ಗೆ ಗಂಟೆ 10ಕ್ಕೆ ಪವಮಾನ ಅಭಿಷೇಕ, ಆಶ್ಲೇಷ ಬಲಿ, ಮಧ್ಯಾಹ್ನ 12 ಗಂಟೆಗೆ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1ಗಂಟೆಗೆ ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ.
ರಾತ್ರಿ ಗಂಟೆ 6.30ಕ್ಕೆ ದೀಪಾರಾಧನೆ, ರಾತ್ರಿ ಪೂಜೆ, 6.45 ಕ್ಕೆ ದೇವರ ಬಲಿ, ನೃತ್ಯೋತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 10ರಿಂದ ಸಿದ್ದಿವಿನಾಯಕ ನಾಟ್ಯಕಲಾ ಕೇಂದ್ರ ಸುರತ್ಕಲ್ ರಕ್ಷಿತ್ ಪಡ್ರೆ ನೇತೃತ್ವದಲ್ಲಿ ಶಿಷ್ಯರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ .