ಬಂಟ್ವಾಳ: ಪ್ರತಿಯೊಬ್ಬ ಪ್ರಜೆ ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಸ್ವಸ್ಥದಿಂದ ಇದ್ದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮಂಗಳೂರು ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ನೇತ್ರ ಚಿಕಿತ್ಸಕರಾದ ಶ್ರೀಧರ ಕೆ.ವಿ. ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಜಿಲ್ಲಾ ವೆನ್‌ಲಾಕ್ ಸಂಚಾರಿ ನೇತ್ರ ಘಟಕ ಮತ್ತು ಕೆ..ಎಂ.ಸಿ.ಆಸ್ಪತ್ರೆ ಮಂಗಳೂರು ಇದರ ತಜ್ಞ ವೈಧ್ಯರ ಸಹಕಾರದಲ್ಲಿ ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಉಚಿತ ಕಣ್ಣು ಪರೀಕ್ಷಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ದೀಪ ಬೆಳಗುವುದರ ಮೂಲಕ ಶಿಬಿರ ಉದ್ಘಾಟಿಸಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮಲತಾ ಹಾಗೂ ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಅನ್ಸಿಲ್ಲಾ ಪತ್ರಾವೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಬಿರದ ಸಂಚಾಲಕರಾದ ವಿಶ್ವನಾಥ ಪೂಜಾರಿ ಕಲಾ, ರೇವತಿ ಬಡಗಬೆಳ್ಳೂರು ಹಾಗೂ ಮಾರ್ಗದರ್ಶಕರಾದ ಬಿ. ದಿರೇಂದ್ರ ಉಪಸ್ಥಿತರಿದ್ದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ತಾರಾನಾಥ ಕೆ. ಹರೀಶ್. ಎಸ್ ಕೋಟ್ಯಾನ್, ಯೋಗೀಶ್ ಪೂಜಾರಿ , ರಾಜೇಶ್ ಸುವರ್ಣ, ಕೋಶಾಧಿಕಾರಿ ಸತೀಶ್ ಪೂಜಾರಿ ಬಾಯಿಲ, ಪ್ರವೀಣ್ ತುಂಬೆ ಉಪಸ್ಥಿತರಿದ್ದರು.
ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬದಿ ವರ್ಗದವರು ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದರು. ಒಟ್ಟು 162 ಜನ ಶಿಬಿರದ ಪ್ರಯೋಜನ ಪಡೆದರು. 124 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಸುವರ್ಣ ಮರ್ದೋಳಿ ದನ್ಯವಾದ ನೀಡಿದರು. ಬಿ. ಶ್ರೀಧರ ಅಮೀನ್ ಕಾರ್‍ಯಕ್ರಮ ನಿರೂಪಿಸಿದರು.