ಬಂಟ್ವಾಳ

ಡಿ.4ರಂದು ಮಂಗಳೂರು ಬಿಷಪ್ ಗುರುದೀಕ್ಷೆಯ ಸುವರ್ಣ ಮಹೋತ್ಸವ ಮಹಾಸಂಭ್ರಮ

ಬಂಟ್ವಾಳ: ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅತೀ ವಂದನೀಯ ಎಲೋಶಿಯಸ್ ಪಾವ್ಲ್ ಡಿಸೋಜ ಅವರ ಗುರುದೀಕ್ಷೆಯ ಸುವರ್ಣ ಮಹೋತ್ಸವ ಮಹಾಸಂಭ್ರಮ ಆಚರಣೆ ಭಾನುವಾರ ಬಂಟ್ವಾಳ ತಾಲೂಕಿನ ಅಗ್ರಾರ್ ಇಗರ್ಜಿಯಲ್ಲಿ ಡಿಸೆಂಬರ್ 4ರಂದು ನಡೆಯಲಿದೆ.

ಜಾಹೀರಾತು

ಈ ವಿಷಯವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೆಥೋಲಿಕ್ ಧರ್ಮಾಧ್ಯಕ್ಷರ ಸುವರ್ಣ ಮಹೋತ್ಸವ ಆಚರಣಾ ಸಮಿತಿ ಬಂಟ್ವಾಳ ವಲಯದ ಪ್ರಧಾನ ಸಂಚಾಲಕ ಪಿಯುಸ್ ಎಲ್. ರೋಡ್ರಿಗಸ್ ತಿಳಿಸಿದರು.

ಸುವರ್ಣ ಮಹೋತ್ಸವ ಪ್ರಯುಕ್ತ ಡಿ.2ರಂದು ಮಧ್ಯಾಹ್ನ 2.30ಕ್ಕೆ ಹೊರೆಕಾಣಿಕೆ ಸಂಭ್ರಮವಿದೆ. ಬಂಟ್ವಾಳ ವಲಯ ಮತ್ತು ಪರಿಸರದ ಹದಿನೈದು ಇಗರ್ಜಿಗಳ ವ್ಯಾಪ್ತಿಯ ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮೀಯರು ಮತ್ತು ಸಮಾಜದ ಮುಖಂಡರ ವತಿಯಿಂದ ಈ ಹೊರೆಕಾಣಿಕೆ ಕಾರ್ಯಕ್ರಮ ನಡೆಯಲಿದೆ.

ಸುವರ್ಣ ಮಹೋತ್ಸವ ಆಚರಣಾ ಕಾರ್ಯಕ್ರಮಕ್ಕಾಗಿ ಮೊಡಂಕಾಪು ಧರ್ಮಕ್ಷೇತ್ರದ ಧರ್ಮಗುರುಗಳಾದ ಅತಿವಂದನೀಯ ಮ್ಯಾಕ್ಸಿಮ್ ಎಲ್. ನೊರೊನ್ಹಾ ಮಾರ್ಗದರ್ಶನದೊಂದಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಡಿ.4ರಂದು ಬೆಳಗ್ಗೆ 10 ಗಂಟೆಗೆ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನೂರಾರು ಧರ್ಮಗುರುಗಳು, ಮೂರು ಬಿಷಪರು, ಸಾವಿರಾರು ಭಕ್ತರೊಂದಿಗೆ ದಿವ್ಯ ಬಲಿಪೂಜೆ ನೆರವೇರುವುದು. ಬಳಿಕ 11.30ಕ್ಕೆ ಸಮಾಜದ ಹಲವಾರು ಗಣ್ಯ ಅತಿಥಿಗಳೊಂದಿಗೆ ಅಭಿನಂದನಾ ಸಭಾ ಕಾರ್ಯಕ್ರಮ ಜೊತೆ ಅತಿಥಿ ಸತ್ಕಾರ ನಡೆಯುವುದು.

ಜಾಹೀರಾತು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸುವರು. ಅತಿಥಿಗಳಾಗಿ ಉಡುಪಿ ಬಿಷಪ್  ಡಾ.ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಬಿಷಪ್ ಡಾ. ಹೆನ್ರಿ ಡಿಸೋಜ, ಅಜ್ಮೀರ್ ಬಿಷಪ್ ಡಾ.ಪಿಯುಸ್ ಥಾಮಸ್ ಡಿಸೋಜ, ಮಂಗಳೂರು ಡಯಾಸ್ ನ ವಿಕಾರ್ ಜನರಲ್ ಡೆನ್ನಿಸ್ ಮೊರಾಸ್ ಪ್ರಭು, ಅರಣ್ಯ ಸಚಿವ ಬಿ.ರಮಾನಾಥ ರೈ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಆಹಾರ ಸಚಿವ ಯು.ಟಿ.ಖಾದರ್, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್ಸಿ ಐವನ್ ಡಿಸೋಜ, ಎಂಎಲ್ಎ ಜೆ.ಆರ್.ಲೋಬೊ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಮಂಗಳೂರು ಪ್ರಾಂತ್ಯದ ಪ್ರಾವಿನ್ಶಿಯಲ್ ಸುಪೀರಿಯರ್ ಜೀನಾ, ಕರ್ನಾಟಕ ಕ್ರೈಸ್ತ ಅಸೋಸಿಯೇಶನ್ ಅಂತಾರಾಷ್ಟ್ರೀಯ ಫೆಡರೇಶನ್ ಅಧ್ಯಕ್ಷ ರೊನಾಲ್ಡ್ ಕುಲಾಸೊ, ಮೂಡುಬಿದರೆ ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ, ಯೆನೆಪೊಯಾ ವಿವಿ ಕುಲಪತಿ ಡಾ.ಯೆನೆಪೊಯಾ ಅಬ್ದುಲ್ಲ ಕುಂಞ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಭಾಗವಹಿಸುವರು ಎಂದು ಪಿಯುಸ್ ರೋಡ್ರಿಗಸ್ ಹೇಳಿದರು.

ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್. ನೊರೊನ್ಹಾ, ಅಗ್ರಾರ್ ಚರ್ಚ್ ಧರ್ಮಗುರು ಗ್ರೆಗೊರಿ ಡಿಸೋಜ, ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಮಿನೇಜಸ್, ಸ್ವಾಗತ ಸಮಿತಿಯ ಜೋನ್ ಸಿರಿಲ್ ಡಿಸೋಜ, ಯೋ ಕುಎಲ್ಲೊ, ಫ್ರಾನ್ಸಿಸ್ ಸಲ್ದಾನಾ, ರೋಯ್ ಕಾರ್ಲೊ, ಆಂಟನಿ ಸಿಕ್ವೇರ, ವಿನ್ಸೆಂಟ್ ಕಾರ್ಲೊ, ವಿಕ್ಟರ್ ವಾಲ್ಟರ್ ನೊರೊನ್ಹಾ, ಲೈನರ್ ಪಿರೇರಾ, ಹ್ಯೂಬರ್ಟ್ ಲೊಬೊ ಸಹಿತ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ