ವಿಟ್ಲ: ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನದ 2 ನೇ ಕಂತನ್ನು ವಿಠಲ ಸುಪ್ರಜಿತ್ ಐಟಿಐಯ 58ವಿದ್ಯಾರ್ಥಿಗಳಿಗೆ ರೂಪಾಯಿ 2,90,000 ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಐಟಿಐ ಯ ಸಂಚಾಲಕ ಸುಬ್ರಾಯ ಪೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು, ಸದಸ್ಯ ಜಾನ್ ಡಿ ಸೋಜಾ, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಎ ಎಸ್, ವಿಠಲ ಸುಪ್ರಜಿತ್ ಐಟಿಐ ಸದಸ್ಯ ಸದಾಶಿವ ಆಚಾರ್ಯ ಭಾಗವಹಹಿಸಿದ್ದರು. ಸುಪ್ರಜಿತ್ ಫೌಂಡೇಶನ್ ಸ್ಕಾಲರ್‌ಶಿಪ್ ಕಮಿಟಿ ಸಂಚಾಲಕ ಅನಂತಕೃಷ್ಣ ಹೆಬ್ಬಾರ್ ಪ್ರಸ್ತಾಪಿಸಿದರು. ಐಟಿಐ ಪ್ರಾಂಶುಪಾಲ ರಘುರಾಮ ಶಾಸ್ತ್ರಿ ಸ್ವಾಗತಿಸಿದರು. ಹೇಮಂತ್ ಟಿ ಕೆ ವಂದಿಸಿದರು. ಆಲ್ಫಾನ್ಸ್ ವಿನ್ಸೆಂಟ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಆಚಾರ್ಯ ಹಾಗೂ ರಮೇಶ್ ರೈ ಸಹಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…