ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿಯನ್ನು 8 ವರ್ಷದ ಬಳಿಕ ಉಡುಪಿಯ ಕಟಪಾಡಿಯಲ್ಲಿ ಬುಧವಾರ ಪತ್ತೆ ಮಾಡುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ.
ಬಂಟ್ವಾಳ ತಾಲೂಕು ಮೂಡಂಬೈಲು ನಿವಾಸಿ ಶಶಿಕಲಾ ರೈ (35) ಅವರಿಗೆ ಉಡುಪಿ ಕಟಪ್ಪಾಡಿ ನಿವಾಸಿ ಗಣೇಶ್ ಶೇರಿಗಾರ (38) ಅವರೊಂದಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ಪತ್ನಿ ಹಾಗೂ ಪುತ್ರನನ್ನು ತವರುಮನೆಯಲ್ಲಿ ಬಿಟ್ಟು ಕೆಲವು ವರ್ಷದಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಪತ್ನಿ ನೀಡಿದ ದೂರಿನ ಹಿನ್ನಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಪ್ರವೀಣ್ ರೈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…