ಬಂಟ್ವಾಳ: ಇರಾ ಗ್ರಾಮ ಪಂಚಾಯತ್ ವತಿಯಿಂದ 2016-17ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಯುವಕ ಮಂಡಲ ಇರಾ ಸಭಾಭವನದಲ್ಲಿ ನಡೆಯಿತು.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ವಿದ್ಯಾರ್ಥಿನಿ ಚೈತನ್ಯ ಅಧ್ಯಕ್ಷತೆ ವಹಿಸಿದ್ದರು.
ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು ಪ್ರಾಥಮಿಕ ಶಾಲೆಗಳಾದ ತಾಳಿತ್ತಬೆಟ್ಟು, ನಡುಕೆಂಜಿಲ, ಬಾಳೆಪುಣಿ, ಪರಪ್ಪು ಇಲ್ಲಿನ ವಿಧ್ಯಾರ್ಥಿಗಳು ಪಾಲ್ಗೊಂಡು ಶಾಲೆಗಳ ಮೂಲಭೂತ ಆವಶ್ಯಕತೆಗಳ ಕುಂದು ಕೊರತೆಗಳ ಬಗ್ಗೆ ಪ್ರಸ್ತಾವನೆಗೈದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಬೇಡಿಕೆಗಳಿಗೆ ಸ್ಪಂದಿಸುವ ಪೂರಕ ಮಾತುಗಳನ್ನಾಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಾವತಿ,ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಮೇಲ್ವಿಚಾರಕಿ ಗುಣವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್, ಪಂಚಾಯತ್ ಸದಸ್ಯರಾದ ಮೊಯ್ದಿಕುಂಞಿ, ನಳಿನಾಕ್ಷಿ , ಸವಿತಾ ಗಣ್ಯರಾದ ವಾಮನ ಪೂಜಾರಿ ಶಾಲಾ ಶಿಕ್ಷಕ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ,ಮಂಗಳ ಗಂಗೋತ್ರಿ ಕೊಣಾಜೆ ಇಲ್ಲಿಯ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಗುಲಾಬಿ ಸ್ವಾಗತಿಸಿ ರಂಜನ್ ಕಾರ್ಯಕ್ರಮ ನಿರೂಪಿಸಿದರು.ಇರ್ಶಾದ್ ಧನ್ಯವಾದ ಸಲ್ಲಿಸಿದರು.