ಬಂಟ್ವಾಳ: ಸರಕಾರದ ವಿವಿಧ ಯೋಜನೆಗಳ ತಿಳುವಳಿಕೆ ಜನರಿಗೆ ಮೂಡಿಸುವಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದು ಎಂದು ಅಮ್ಮುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಮನ ಆಚಾರ್ಯ ಹೇಳಿದರು.
ಅಮ್ಮುಂಜೆ ಮುಡಾಯಿಕೋಡಿಯಲ್ಲಿ ಕೇಂದ್ರ ಸರಕಾರದ ಕಾರ್ಮಿಕ ಶಿಕ್ಷಣ ಮಂಡಳಿ, ದಿಶಾ ಟ್ರಸ್ಟ್ ಕೈಕಂಬ, ಪ್ರಗತಿ ಕೃಷಿಕರ ಸಂಘ ಮುಡಾಯಿಕೋಡಿ ಅಮ್ಮುಂಜೆ ಜಂಟಿ ಆಶ್ರಯದಲ್ಲಿ ನಡೆದ ತರಬೇತಿ ಕಾರ್‍ಯಗಾರದ ಎರಡು ದಿನದ ಅಸಂಘಟಿತ ಕಾರ್ಮಿಕರ ತರಬೇತಿ ಕಾರ್‍ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಗತಿ ಕೃಷಿಕರ ಸಂಘದ ಅಧ್ಯಕ್ಷ ಗಾಡ್ರಿಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತ ತರಬೇತಿ ಕಾರ್‍ಯಗಾರ ಉಧ್ಘಾಟಿಸಿದರು. ಅಮ್ಮುಂಜೆ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಕವಿತಾ , ದಿಶಾ ಸಂಸ್ಥೆಯ ನಿರ್ದೇಶಕ ಸಿಲ್ವೆಸ್ಟರ್ ಡಿ’ ಸೋಜ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್ ಕುಮಾರ್, ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್, ಕ್ಷೇತ್ರ ಸಂಯೋಜಕ ರುದೇಶ್ ಉಳಾಯಿಬೆಟ್ಟು ಪೆರ್ಮಂಕಿ ಪ್ರಗತಿಪರ ಕೃಷಿಕ ಆಂಟೋನಿ ಡಿ ಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಯಮವಾಗಿ ಹೈನುಗಾರಿಕೆ, ತರಕಾರಿ ಕೃಷಿ ವಿವಿಧ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ದಿಶಾ ಸಂಸ್ಥೆಯ ಕಾರ್ಯಕರ್ತೆ ಹರಿಣಾಕ್ಷಿ ಮತ್ತು ಗುಣವತಿ, ಕೃಕರ ಸಂಘದ ಕಾರ್‍ಯದರ್ಶಿ ಲೀಲಾವತಿ ಉಪಸ್ಥಿತರಿದ್ದರು.