ಬಂಟ್ವಾಳ: ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಡುಪಿ ಜಿಲ್ಲಾ ವಳಕಾಡುನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆ 2016-17 ರಲ್ಲಿ ಕರಾಟೆ ಯ 36-40 ಕೆ.ಜಿ.ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಸಹನಾ ಎಂ.ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕು ಕಲಾಬಾಗಿಲು ಬುರೂಜ್ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಸಹನಾ ಎಂ.ಶೆಟ್ಟಿ ನರ್‍ವಲ್ದಡ್ಡ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದೆ ನಡೆಸಿರುವ ಕರಾಟೆ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರಾಟೆಯಲ್ಲಿ ವಿಶೇಷ ಸಾಧನೆಗೈದಿರುವ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಛಾಂಪಿಯನ್ ಶಿಫ್‌ನಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮೂಡಬಿದಿರೆಯ ನದೀಂ ಮತ್ತು ಸರ್ಫರಾಜ್ ಅವರು ತರಬೇತಿ ನೀಡಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…