ಬಂಟ್ವಾಳ: ಉಳಿ ಗ್ರಾಮದ ಉಳಿಬೈಲಿನಲ್ಲಿ ಪಾದಾಚಾರಿ ಗೃಹಿಣಿಯೋರ್ವರ ಸುಮಾರು 80 ಸಾವಿರ ರೂ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಅಪರಿಚಿತನೋರ್ವ ಕಿತ್ತೊಯ್ದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಉಗ್ಗಪ್ಪ ಪೂಜಾರಿ ಅವರ ಪತ್ನಿ ಶಾರದ ಅವರು ಕರಿಮಣಿ ಸರ ಕಳಕೊಂಡವರು. ಅವರು ತಮ್ಮ ಮಗುವನ್ನು ಶಾಲೆಗೆ ಬಿಟ್ಟು ವಾಪಾಸು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಬೈಕಿನಲ್ಲಿ ಬಂದ ಅಪರಿಚಿತ ದಾರಿ ಕೇಳುವ ನೆಪದಲ್ಲಿ ಶಾರದ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದಾನೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…